ಕರ್ನಾಟಕ

karnataka

ETV Bharat / state

ಶೇ.95ರಷ್ಟು 94ಸಿ ಹಕ್ಕುಪತ್ರ ವಿತರಣೆ ಪೂರ್ಣ: ಶಾಸಕ ರಾಜೇಶ್ ನಾಯ್ಕ್ - MLA Rajesh Naik

ಇಂದು ಶಾಸಕ ರಾಜೇಶ್ ನಾಯ್ಕ್ ಅವರು ಕ್ಷೇತ್ರದ ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ ವಿತರಿಸಿದರು.

Bantvala
Bantvala

By

Published : Oct 8, 2020, 5:06 PM IST

ಬಂಟ್ವಾಳ:ಕ್ಷೇತ್ರದಲ್ಲಿ ಶೇ.95ರಷ್ಟು ಫಲಾನುಭವಿಗಳಿಗೆ 94ಸಿ ಹಕ್ಕುಪತ್ರವನ್ನು ಒದಗಿಸಲಾಗಿದ್ದು, ಉಳಿದವರಿಗೂ ಶೀಘ್ರವೇ ವಿತರಿಸಲಾಗುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಇಂದು ತಮ್ಮ ಕಚೇರಿಯಲ್ಲಿ ಕ್ಷೇತ್ರದ 73 ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಬಂಟ್ವಾಳ ಕ್ಷೇತ್ರದಲ್ಲಿ ನಿರಂತರವಾಗಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೇ ಶೇ 95ರಷ್ಟು ವಿತರಣೆ ಪೂರ್ಣಗೊಂಡಿದೆ. ಮನೆ ಇದ್ದರೂ ಹಕ್ಕುಪತ್ರ ಇಲ್ಲದೇ ಇದ್ದಾಗ ಸರ್ಕಾರಿ ಸೌಲಭ್ಯ ಹಾಗೂ ಬ್ಯಾಂಕ್ ಸಾಲ ಪಡೆಯುವುದು ಕಷ್ಟವಾಗಿದ್ದು, ಹಕ್ಕುಪತ್ರ ಸಿಕ್ಕಿದಾಗ ದಾಖಲೆಯ ಜೊತೆ ಸೌಲಭ್ಯಗಳನ್ನೂ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಈ ವೇಳೆ ತಾ.ಪಂ.ಸದಸ್ಯರಾದ ಪ್ರಭಾಕರ ಪ್ರಭು, ಯಶವಂತ ಪೊಳಲಿ, ಕಂದಾಯ ನಿರೀಕ್ಷಕರಾದ ನವೀನ್ ಬೆಂಜನಪದವು, ದಿವಾಕರ ಮುಗುಳಿಯ, ಗ್ರಾಮ ಕರಣಿಕರಾದ ಜನಾರ್ದನ ಜೆ, ರಾಜು, ಪ್ರಶಾಂತ್, ಕರಿಬಸಪ್ಪ, ವೈಶಾಲಿ, ಶಿಲ್ಪಾ, ಅನಿಲ್, ಆಶಾ ಮೆಹಂದಲೆ, ಲಿಂಗಪ್ಪ ಜಜ್ಲುಂಬಿ ಉಪಸ್ಥಿತರಿದ್ದರು.

ABOUT THE AUTHOR

...view details