ಆರೋಗ್ಯ ತಪಾಸಣೆ ಮಾಡಿಸುವಂತೆ ಮಸೀದಿ ಮೈಕ್‌ನಲ್ಲಿ ಶಾಸಕ ಖಾದರ್ ಮನವಿ - MLA U.T. Khadr appeals to people
ತೊಕ್ಕೊಟ್ಟು ಮೂಲದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆ ವ್ಯಕ್ತಿಯು ಚೆಂಬುಗುಡ್ಡೆ ಮಸೀದಿಗೆ ಹಲವು ಬಾರಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿರುವ ಹಿನ್ನೆಲೆ ಶಾಸಕ ಖಾದರ್ ಮೈಕ್ ಮೂಲಕ ಆಸುಪಾಸಿನ ಜನರಿಗೆ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ.
ಆರೋಗ್ಯ ತಪಾಸಣೆಗೆ ಮಾಡಿಸುವಂತೆ ಮಸೀದಿ ಮೈಕ್‌ನಲ್ಲಿ ಖಾದರ್ ಮನವಿ
ಮಂಗಳೂರು: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮಸೀದಿ ಮೈಕ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಶಾಸಕ ಯು.ಟಿ.ಖಾದರ್ ಜನರಿರಲ್ಲಿ ಮನವಿ ಮಾಡಿದ್ದಾರೆ.
ಖಾದರ್ ಮನವಿಯ ಹಿನ್ನೆಲೆಯಲ್ಲಿ ನಾಗರಿಕರು ಸ್ವಯಂಪ್ರೇರಿತವಾಗಿ ಆಗಮಿಸಿ ತಪಾಸಣೆಗೆ ಒಳಗಾಗುತ್ತಿದ್ದಾರೆ.