ಕರ್ನಾಟಕ

karnataka

ETV Bharat / state

ಹರೇಕಳ-ಅಡ್ಯಾರ್ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಸ್ಥಳಕ್ಕೆ ಖಾದರ್ ಭೇಟಿ - ಉಳ್ಳಾಲ ಸುದ್ದಿ

ಹರೇಕಳ-ಅಡ್ಯಾರ್ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಇಂದು ಶಾಸಕ ಯು.ಟಿ.ಖಾದರ್​ ಭೇಟಿ ಮಾಡಿ ಪರಿಶೀಲಿಸಿದ್ದಾರೆ.

MLA khadar
ಶಾಸಕ ಯು.ಟಿ ಖಾದರ್​ ಭೇಟಿ

By

Published : Feb 12, 2021, 10:13 PM IST

Updated : Feb 12, 2021, 10:23 PM IST

ಉಳ್ಳಾಲ:ಹರೇಕಳ-ಅಡ್ಯಾರ್ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಶಾಸಕ ಯು.ಟಿ.ಖಾದರ್ ನೇತೃತ್ವದ ನಿಯೋಗ ಭೇಟಿ ನೀಡಿ‌ ಪರಿಶೀಲಿಸಿತು.

ಈ ವೇಳೆ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, "ಬ್ರಿಡ್ಜ್ ಕಂ ಬ್ಯಾರೇಜ್ ಕುರಿತು ಸ್ಥಳೀಯರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದೆ. ಅನುದಾನ ಮಂಜೂರಾಗುವ ಮುನ್ನ ಸೇತುವೆ ಕುರಿತು ಟೀಕೆಗಳು ಕೇಳಿ ಬಂದಿತ್ತು. ಆದರೆ ಪಶ್ಚಿಮ ವಾಹಿನಿ ಯೋಜನೆಯ ಅಂಗವಾದ ಎತ್ತಿನಹೊಳೆ ಯೋಜನೆಯಲ್ಲಿ ಜಿಲ್ಲೆಗೆ ಅನ್ಯಾಯವಾಗಿದೆ. ಈ ಬಗ್ಗೆ ನ್ಯಾಯ ಕೊಡುವ ಉದ್ದೇಶದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಅದಕ್ಕಾಗಿ ಸ್ವಾಭಿಮಾನಿ ಗುತ್ತಿಗೆದಾರ ಜಿ.ಶಂಕರ್ ಅಂಡ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಒಟ್ಟು ವೆಚ್ಚ 200 ಕೋಟಿ ರೂ. ಇಡಲಾಗಿತ್ತು. ಡಿಪಿಆರ್​ನಲ್ಲಿ ಟೆಂಡರ್ ಕರೆದಾಗ ರೂ. 192.5 ಕೋಟಿಗೆ ಕಾಮಗಾರಿಯ ಗುತ್ತಿಗೆಯನ್ನು ಜಿ.ಶಂಕರ್ ಕಂಪನಿ ಕಾಮಗಾರಿ ವಹಿಸಿಕೊಂಡಿತು. ಮುಂದಿನ ಮಳೆಗಾಲ ಬರುವ ಮುನ್ನ ಪಾದಚಾರಿಗಳಿಗೆ ನಡೆದುಕೊಂಡು ಹೋಗುವ ವ್ಯವಸ್ಥೆಯನ್ನು ನೂತನ ಡ್ಯಾಂನಲ್ಲಿ ಕಲ್ಪಿಸಲಾಗುವುದು ಎಂದರು.

ಶಾಸಕ ಯು.ಟಿ ಖಾದರ್​ ಭೇಟಿ

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೊದಲ ಯೋಜನೆ ಇದಾಗಿದೆ. ಬ್ಯಾರೇಜ್​ನಲ್ಲಿ 7.5 ಮೀ. ಅಗಲದ ರಸ್ತೆ, 1 ಮೀ.ನಷ್ಟು ಎರಡು ಕಡೆಗಳಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬೃಹತ್ ವಾಹನಗಳನ್ನು ಸೇತುವೆಯಲ್ಲಿ ಬಿಡಲಾಗುವುದಿಲ್ಲ. ಗ್ರಾಮೀಣ ಮಟ್ಟ ಹರೇಕಳ ಸಂಸ್ಕೃತಿಯನ್ನು ಸಂಪೂರ್ಣ ನಶಿಸಿ ಹೋಗುವ ಸಾಧ್ಯತೆಯಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ. ಸೇತುವೆ ಮೂಲಕ ಮಂಗಳೂರು ತಲುಪಬೇಕಾದ ಗ್ರಾಮದ ಜನರಿಗೆ 25 km ಕಡಿಮೆಯಾಗಲಿದೆ. ನಿರ್ಮಾಣ ಹಂತದಲ್ಲಿರುವ ಬ್ಯಾರೇಜ್​ನಲ್ಲಿ 18.7 ಮಿಲಿಯನ್ ಕ್ಯೂಸೆಕ್​​ ಮೀ. ನೀರು ಶೇಖರಿಸುವ ಸಾಮಥ್ಯ‌೯ವಿದೆ. ತುಂಬೆಯಲ್ಲಿ ನೀರು ಖಾಲಿಯಾದಲ್ಲಿ ನಗರ ಪ್ರದೇಶಕ್ಕೆ ನೂತನ ಯೋಜನೆಯಿಂದ ನೀರು ಕೊಡುವ ಕಾರ್ಯ ಆಗಲಿದ ಎಂದರು.

ಸೇತುವೆ ನಿರ್ಮಾಣದಿಂದ ಹರೇಕಳ ಗ್ರಾಮ ಪ್ರವಾಸೋದ್ಯಮ ಕೇಂದ್ರವೂ ಆಗುವುದು. ಡ್ಯಾಂ ನೋಡಲು ಜನ ಬಂದಾಗ ವ್ಯಾಪಾರ ವಹಿವಾಟುಗಳು ಅಭಿವೃದ್ಧಿ ಆಗಲಿದೆ. ಬೋಟ್ ರೈಡಿಂಗ್, ಮೀನು ಸಂತಾನೋತ್ಪತ್ತಿ ಕಾರ್ಯಗಳಿಗೂ ಇಲ್ಲಿ‌ ಚಾಲನೆ ನೀಡಬಹುದು ಎಂದರು.

ಇನ್ನು ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಶಾಸಕರು, "ವಿದ್ಯಾರ್ಥಿಗಳು ಕಾಮಗಾರಿ ವೀಕ್ಷಣೆ ಮಾಡಬೇಕು. ತಳಮಟ್ಟದ ಕಾರ್ಯವನ್ನು ವಿದ್ಯಾರ್ಥಿಗಳು ನೋಡುವಂತಾಗಬೇಕು. ಕೇವಲ ಕಾಮಗಾರಿ ಮುಗಿದ ನಂತರದ ಸೇತುವೆ ನೋಡಿದರೆ ಸಾಲದು. ಸಜೀಪ ಮುನ್ನೂರು ಬಳಿ ಜಾಕ್ವೆಲ್ ಟ್ಯಾಂಕ್, ಕೆಎಐಡಿಬಿ ಪ್ರದೇಶದ ಕಂಬ್ಲಪದವು ಬಳಿ ಟ್ರೀಟ್ ಮೆಂಟ್ ಪ್ಲಾಂಟ್ ಹಾಗೂ ಚೆಂಬುಗುಡ್ಡೆಯಲ್ಲಿ ರೂ. 60 ಲಕ್ಷ ವೆಚ್ಚದ ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿದೆ. ಪೈಪ್​​ಲೈನ್ ಉದ್ದಕ್ಕೂ ಪ್ರತೀ ಗ್ರಾಮದಲ್ಲಿ ಟೀ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮದೊಳಕ್ಕೆ ನೂತನ ಪೈಪ್​​ಲೈನ್ ಅಳವಡಿಸಲು ರೂ. 280 ಕೋಟಿ ಪ್ರಪೋಸಲ್ ಸರ್ಕಾರಕ್ಕೆ ನೀಡಲಾಗಿದೆ. ಸರ್ಕಾರ ಅದನ್ನು ಮಂಜೂರು ಮಾಡುವ ವಿಶ್ವಾಸವಿದೆ. ಅಲ್ಲದೆ ಜಲ ಜೀವನ ಯೋಜನೆಯಡಿ ಅಲ್ಲಲ್ಲಿ ಟ್ಯಾಂಕ್ ನಿರ್ಮಾಣ ಆಗಲಿದೆ" ಎಂದರು.

Last Updated : Feb 12, 2021, 10:23 PM IST

ABOUT THE AUTHOR

...view details