ಬೆಳ್ತಂಗಡಿ:ದೇಶದ ಭದ್ರತೆ ಮತ್ತು ಏಕತೆಗೆ ಬಹುದೊಡ್ಡ ಕಂಟಕವಾಗಿರುವ ಕಮ್ಯುನಿಸ್ಟ್ ಪ್ರೇರಿತ ನಕ್ಸಲ್ ಸಂಘಟನೆಗಳು ಸೈನಿಕರ ಮೇಲೆ ನಡೆಸಿದ ಭೀಕರ ದಾಳಿಯನ್ನು ಖಂಡಿಸುತ್ತೇನೆ ಮತ್ತು ಸೈನಿಕರ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಎನ್ನುವ ನಂಬಿಕಯಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ನಕ್ಸಲರ ದಾಳಿಗೆ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಬೆಳ್ತಂಗಡಿ ಬಿಜೆಪಿ ಮಂಡಲ ಯುವಮೋರ್ಚಾ ವತಿಯಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: ಮೊಬೈಲ್ ಗೇಮ್‍ಗಾಗಿ ಬಾಲಕನ ಕೊಲೆ: ಆರೋಪಿ ತಂದೆಯ ಬಂಧನ
ಮುಂದಿನ ದಿನಗಳಲ್ಲಿ ಕಾಡಿನಲ್ಲಿರುವ ನಕ್ಸಲರು ಮತ್ತು ಅವರಿಗೆ ಬೆಂಗಾವಲಾಗಿರುವ ನಗರವಾಸಿ ನಕ್ಸಲರ ಮೂಲೋತ್ಪಾಟನೆಗೆ ಈ ದುಷ್ಕೃತ್ಯ ನಾಂದಿಯಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೈನಿಕರ ಶಿಬಿರಕ್ಕೆ ಭೇಟಿ ನೀಡಿ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸಿದ್ದಾರೆ ಮತ್ತು ನಕ್ಸಲ್ ಸಂಘಟನೆಗಳ ವಿರುದ್ದ ಕಠಿಣ ಪ್ರತೀಕಾರದ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ನೆರವೇರಿಸಿ ಮೊಂಬತ್ತಿ ಬೆಳಗಿಸಿ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.