ಬೆಳ್ತಂಗಡಿ(ದ.ಕ): ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಹಗಲು ರಾತ್ರಿ ಬಡ ಕುಟುಂಬಗಳ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರು ಉದ್ಯೋಗಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಸರ್ಕಾರ ಆದೇಶ ಜಾರಿ ಮಾಡಿತ್ತು .
ಲಾಕ್ಡೌನ್ ಸಮಯದಲ್ಲಿ ಕೆಲಸ ಮಾಡಿದ ಗೃಹರಕ್ಷಕ ಸಿಬ್ಬಂದಿ ಸೇವೆ ಮುಂದುವರಿಸಿ: ಸಿಎಂಗೆ ಮನವಿ
ಕೇವಲ ಕೊರೊನ ಸಂದರ್ಭದಲ್ಲಿ ಮಾತ್ರ ಅಲ್ಲ, ಬಂದೋಬಸ್ತ್, ಸಂಚಾರ ನಿಯಂತ್ರಣ, ಅತಿವೃಷ್ಟಿ ಹೀಗೆ ಪ್ರತಿ ವಿಪತ್ತಿನ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಜೊತೆ ಕೆಲಸ ಮಾಡಿರುವ ಗೃಹರಕ್ಷಕ ಇಲಾಖೆಯ ಸಿಬ್ಬಂದಿಯನ್ನು ಆಯಾಯ ಇಲಾಖೆಗಳಲ್ಲಿಯೇ ಮುಂದುವರಿಸಬೇಕು ಎಂದು ಶಾಸಕ ಹರೀಶ್ ಪೂಂಜಾ ಮನವಿ ಮಾಡಿದ್ದಾರೆ.
ಹರೀಶ್ ಪೂಂಜಾ
ಈ ಆದೇಶವನ್ನು ರದ್ದುಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮನವಿ ಮಾಡಿದರು.