ಬೆಳ್ತಂಗಡಿ: ಉಳ್ಳಾಲ ವಿಧಾನಸಭಾ ಕ್ಷೇತ್ರದ 2100 ಮಂದಿಗೆ ತಮ್ಮ ಸ್ವಂತ ಖರ್ಚಿನಿಂದ ಆಹಾರ ಸಾಮಾಗ್ರಿಗಳ ಕಿಟ್ಗಳನ್ನು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಸಾಂಕೇತಿಕವಾಗಿ ಶಾಸಕ ಹರೀಶ್ ಪೂಂಜಾ ವಿತರಿಸಿದರು.
2100 ಜನರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸಿದ ಶಾಸಕ ಹರೀಶ್ ಪೂಂಜಾ - distributes food kits to 2100 people
ಉಳ್ಳಾಲ ವಿಧಾನಸಭಾ ಕ್ಷೇತ್ರದ 2100 ಜನರಿಗೆ ಆಹಾರ ಸಾಮಾಗ್ರಿ ಕಿಟ್ಗಳನ್ನು ಶಾಸಕ ಹರೀಶ್ ಪೂಂಜಾ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಉಳ್ಳಾಲ ವಿಧಾನಸಭಾ ಕ್ಷೇತ್ರದ ನನ್ನ ಪ್ರೀತಿಯ ಬಂಧುಗಳಿಗೆ ಲಾಕ್ಡೌನ್ ಕಾರಣದಿಂದ ತೊಂದರೆಯಾಗದಿರಲಿ ಅನ್ನುವ ಕಾರಣಕ್ಕೆ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಇವರ ಮುಖಾಂತರ ಸುಮಾರು 2100 "ಶ್ರಮಿಕ ನೆರವು" ಆಹಾರ ಸಾಮಾಗ್ರಿ ಕಿಟ್ಗಳನ್ನು ಹಸ್ತಾಂತರಿಸುತ್ತಿದ್ದೇವೆ.
ಇದು ನಮ್ಮ ಕಾರ್ಯಕರ್ತ ಬಂಧುಗಳ ತೊಂದರೆಗಳನ್ನೆಲ್ಲಾ ನಿವಾರಿಸುವುದಿಲ್ಲ ಅನ್ನುವುದು ಸತ್ಯ. ಆದರೆ ಕೋವಿಡ್-19 ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಅವರ ಜೊತೆಗೆ ಒಂದು ಕುಟುಂಬದವರ ಹಾಗೆ ಇದ್ದೇವೆ ಎನ್ನುವ ಪ್ರೀತಿಗಾಗಿ, ವಿಶ್ವಾಸಕ್ಕಾಗಿ ಕಿಟ್ ವಿತರಿಸುತ್ತಿದ್ದೇವೆ ಎಂದರು.