ಬೆಳ್ತಂಗಡಿ(ದಕ್ಷಿಣಕನ್ನಡ):ನಮ್ಮ ಹಿಂದೂ ಸಮಾಜ ಹಾಗೂ ಶ್ರೀರಾಮ ಜನ್ಮ ಸ್ಥಳವನ್ನು ಉಳಿಸಬೇಕೆಂಬ ಹೋರಾಟವನ್ನು ನಡೆಸಿದಂತಹ ಹೋರಾಟಗಾರರ ಮೇಲಿದ್ದಂತಹ ಆರೋಪ ಖುಲಾಸೆ ಆಗಿರುವುದು ಶ್ರೀರಾಮನ ಮೂಲಕ ಹಿಂದೂ ಸಮಾಜಕ್ಕೆ ಸಿಕ್ಕಿರುವಂತಹ ಜಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಈ ತೀರ್ಪು ರಾಮನ ಮೂಲಕ ಹಿಂದೂ ಸಮಾಜಕ್ಕೆ ದೊರೆತ ಜಯ: ಶಾಸಕ ಹರೀಶ್ ಪೂಂಜ - ಬೆಳ್ತಂಗಡಿ ಶಾಸಕ ಹರೀಶ್ ಪೂಂಜ
ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಟ್ಯಂತರ ಹಿಂದೂ ಸಂಘಟನೆಗಳು ರಾಮನ ಜನ್ಮ ಸ್ಥಳದಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದಾರೆ. ಈ ವೇಳೆ ಕೆಲ ಆಕ್ರೋಶ ಭರಿತ ಸಂಘಟನೆಗಳು ಪ್ರತಿಭಟನೆ ಮಾಡಿ ಕಟ್ಟಡ ನೆಲಕ್ಕುರುಳಿಸಿದ್ದರು. ಆ ಸಮಯದಲ್ಲಿ ಕೆಲವು ಹಿಂದೂ ಮುಖಂಡರುಗಳು ಆರೋಪಿಗಳೆಂದು ಬಿಂಬಿಸಿ ಅವರ ಮೇಲೆ ಮೊಕದ್ದಮೆ ಹಾಕಲಾಗಿತ್ತು. ಇದೀಗ ಎಲ್ಲಾ ಹಿಂದೂ ಮುಖಂಡರು ಖುಲಾಸೆಯಾಗಿದ್ದು ಸ್ವಾಗತಾರ್ಹ ಎಂದರು.
ಇನ್ನು, ಸಿದ್ದರಾಮಯ್ಯ ಕಾನೂನಿನ ಬಗ್ಗೆ ಅರಿತಿರುವಂತಹ ಒಬ್ಬ ಹಿರಿಯ ರಾಜಕಾರಣಿ. ಪ್ರತಿ ಬಾರಿ ನ್ಯಾಯಾಲಯದ ಪ್ರತಿಯೊಂದು ವಿಚಾರದಲ್ಲೂ ಕಾನೂನು ಹಾಗೂ ನ್ಯಾಯದ ಬಗ್ಗೆ ಹೇಳುತ್ತಿದ್ದರು. ಆದರೆ, ಇಂದಿನ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಪ್ರತಿಪಕ್ಷದ ಹಿರಿಯ ನಾಯಕನಾಗಿ ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.