ಮಂಗಳೂರು:ಸುರತ್ಕಲ್ ಗುಡ್ಡೆಕೊಪ್ಲದ ಸೀಲ್ಡೌನ್ ಪ್ರದೇಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ ನೀಡಿ ಪಡಿತರ ಕಿಟ್ ವಿತರಿಸಿದರು.
ಗುಡ್ಡೆಕೊಪ್ಲ ಸೀಲ್ಡೌನ್ ಪ್ರದೇಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ.. ದಿನಸಿ ಕಿಟ್ ವಿತರಣೆ - ಮಂಗಳೂರು ಸುದ್ದಿ
ಸುರತ್ಕಲ್ ಗುಡ್ಡೆಕೊಪ್ಲ ಬಳಿ ಶುಕ್ರವಾರ 68 ವಯಸ್ಸಿನ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಶಾಸಕ ಡಾ.ಭರತ್ ಶೆಟ್ಟಿ ಸೀಲ್ಡೌನ್ ಪ್ರದೇಶಕ್ಕೆ ಭೇಟಿ ನೀಡಿ ಪಡಿತರ ಕಿಟ್ ವಿತರಿಸಿದರು.
![ಗುಡ್ಡೆಕೊಪ್ಲ ಸೀಲ್ಡೌನ್ ಪ್ರದೇಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ.. ದಿನಸಿ ಕಿಟ್ ವಿತರಣೆ Mla bharath shetty visit guddekopla sealdown area](https://etvbharatimages.akamaized.net/etvbharat/prod-images/768-512-7231068-164-7231068-1589692378182.jpg)
ಸುರತ್ಕಲ್ ಗುಡ್ಡೆಕೊಪ್ಲ ಬಳಿ ಶುಕ್ರವಾರ 68 ವಯಸ್ಸಿನ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಪ್ರದೇಶದ ಆಸುಪಾಸಿನ 100 ಮೀಟರ್ ಅಂತರದಲ್ಲಿ ಸೀಲ್ಡೌನ್ ಮಾಡಲಾಗಿದೆ. ಈ ವೇಳೆ ಸ್ಥಳೀಯರೊಂದಿಗೆ ಮಾತನಾಡಿದ ಅವರು, ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿರುವ ಮೂಲದ ಬಗ್ಗೆ ವೈದ್ಯರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಊರಿನ ಜನತೆಗೆ ಯಾವುದೇ ಸಮಸ್ಯೆ ಎದುರಾಗದಂತೆ ಪಡಿತರ,ತರಕಾರಿ ಮತ್ತಿತರ ದಿನಬಳಕೆಯ ವಸ್ತು ವಿತರಿಸಲಾಗುವುದು ಎಂದರು.
ಇನ್ನು,ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಥಮ ಕೇಸ್ ಆಗಿದ್ದು, ಇದನ್ನ ಗಂಭೀರವಾಗಿ ತೆಗೆದುಕೊಳ್ಳುವ ಮೂಲಕ ಕೋವಿಡ್-19 ಹರಡದಂತೆ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.