ಮಂಗಳೂರು :ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಮಂಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಜನರಿಗೆ ದಾಖಲೆ ಒದಗಿಸದೆ ಸತಾಯಿಸುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಂಗಳೂರು ಶಾಸಕ ಡಾ.ಭರತ್ ಶೆಟ್ಟಿ ಆರ್ಟಿಸಿ ಸಹಿತ ಸಾಕಷ್ಟು ದಾಖಲೆಗಳು ಸಕಾಲಕ್ಕೆ ದೊರಕುತ್ತಿಲ್ಲ ಎಂಬ ಜನರ ದೂರಿಗೆ ಸ್ಪಂದಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಈ ಸಂದರ್ಭ ಸರಿಯಾದ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಕಚೇರಿಯಲ್ಲಿ ಜನರಿಗೆ ಸರಿಯಾದ ರೀತಿ ಸ್ಪಂದನೆ ನೀಡದವರನ್ನು, ಸರಿಯಾದ ಕೆಲಸ ಮಾಡದವರನ್ನು ಪದವಿಯಿಂದ ವಜಾ ಮಾಡಿ ಎಂದು ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ಸೂಚಿಸಿದರು. ಕಚೇರಿಯಲ್ಲಿ ಸಾಕಷ್ಟು ಜನ ಕೆಲಸಗಾರರಿದ್ದರೂ, ಸರಿಯಾದ ದಾಖಲೆಗಳನ್ನು ನೀಡದೆ ತಿಂಗಳುಗಟ್ಟಲೆ ಸತಾಯಿಸುತ್ತಿರುವ ಬಗ್ಗೆ, ಕಡತ ವಿಲೇವಾರಿ ಆಗದಿರುವ ಬಗ್ಗೆ ಕಾರಣ ಕೇಳಿದ ಶಾಸಕರು, ಅಧಿಕಾರಿಗಳು, ಕೆಲಸಗಾರರ ಮೇಲೆ ಗರಂ ಆದರು.
ಸರಿಯಾಗಿ ಕಡತಗಳು ವಿಲೇವಾರಿಯಾಗದಿದ್ದಲ್ಲಿ ಇಲಾಖೆಗೆ ಆದೇಶಿಸುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಪರಿಸ್ಥಿತಿ ಹೀಗೆಯೇ ಮುಂದುವರಿದ್ರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು. ಇದೇ ಸಂದರ್ಭ ಮಿನಿ ವಿಧಾನಸೌಧದಲ್ಲಿರುವ ವಿವಾಹ ನೋಂದಣಿ ಹಾಗೂ ಭೂದಾಖಲೆ ಪತ್ರಗಳ ರೆಕಾರ್ಡ್ ರೂಮಿಗೂ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.