ಕರ್ನಾಟಕ

karnataka

ETV Bharat / state

ಅಪ್ಪನ ₹90 ಸಾವಿರ ಜತೆ ನಿಶ್ಚಿತಾರ್ಥ ವೇಳೆ ವರನ ಕಡೆಯವರು ನೀಡಿದ್ದ ಚಿನ್ನಾಭರಣ ಸಹಿತ ಯುವತಿ ನಾಪತ್ತೆ.. - ವರನ ಕಡೆಯವರು ನೀಡಿದ ಚಿನ್ನಾಭರಣ ಸಮೇತ ಪರಾರಿಯಾದ ಯುವತಿ

ಯುವಕನ ಕಡೆಯವರು ಸುಮಾರು 1 ಲಕ್ಷ ರೂ. ಮೌಲ್ಯದ ಬಂಗಾರದ ಚೈನ್, ಉಂಗುರ, ಬೆಳ್ಳಿ ಗೆಜ್ಜೆ, ಬೆಳ್ಳಿ ಉಂಗುರ, ಕಿವಿಯೋಲೆಗಳನ್ನು ನೀಡಿದ್ದರು. ನಿಶ್ಚಿತಾರ್ಥವಾಗಿದ್ದ ಯುವತಿ, ಯುವಕನ ಕಡೆಯವರು ನೀಡಿದ ಚಿನ್ನಾಭರಣ ಸಮೇತ ನಾಪತ್ತೆಯಾಗಿದ್ದಾಳೆ..

ಚಿನ್ನಾಭರಣ ಸಹಿತ ಯುವತಿ ನಾಪತ್ತೆ
ಚಿನ್ನಾಭರಣ ಸಹಿತ ಯುವತಿ ನಾಪತ್ತೆ

By

Published : Sep 8, 2021, 4:51 PM IST

ಮಂಗಳೂರು :ನಿಶ್ಚಿತಾರ್ಥ ವೇಳೆ ವರನ ಕಡೆಯವರು ನೀಡಿದ ಚಿನ್ನಾಭರಣ ಸಹಿತ ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಬರ್ಕೆ ಠಾಣೆ ವ್ಯಾಪ್ತಿಯ ಆರೋಮ ಪಾರ್ಕ್ ಅಪಾರ್ಟ್ಮೆಂಟ್ ನಲ್ಲಿ ವಾಚ್ ಮೆನ್ ಕೆಲಸ ಮಾಡಿಕೊಂಡಿರುವ ಯಶೋಧಾ ಎಂಬುವರ ಮಗಳು ರೇಶ್ಮಾ (21) ಎಂಬಾಕೆ ನಾಪತ್ತೆಯಾದವಳು. ಇವಳ ನಿಶ್ಚಿತಾರ್ಥವನ್ನು ಆಗಷ್ಟ್ 21ರಂದು ಬೊಮ್ಮಹಳ್ಳಿಯ ಯುವಕನೊಂದಿಗೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಯುವಕನ ಕಡೆಯವರು ಸುಮಾರು 1 ಲಕ್ಷ ರೂ. ಮೌಲ್ಯದ ಬಂಗಾರದ ಚೈನ್, ಉಂಗುರ, ಬೆಳ್ಳಿ ಗೆಜ್ಜೆ, ಬೆಳ್ಳಿ ಉಂಗುರ, ಕಿವಿಯೋಲೆಗಳನ್ನು ನೀಡಿದ್ದರು. ನಿಶ್ಚಿತಾರ್ಥವಾಗಿದ್ದ ಯುವತಿ, ಯುವಕನ ಕಡೆಯವರು ನೀಡಿದ ಚಿನ್ನಾಭರಣ ಸಮೇತ ನಾಪತ್ತೆಯಾಗಿದ್ದಾಳೆ.

ಜೊತೆಗೆ ತಂದೆಯ ಬ್ಯಾಂಕಿನ ಖಾತೆಯಲ್ಲಿದ್ದ 90 ಸಾವಿರ ಹಣವನ್ನು ಅಕ್ಬರ್ ಅಲಿ ಎಂಬಾತನ ಹೆಸರಿಗೆ ವರ್ಗಾಯಿಸಿದ್ದಾಳೆ. ಈ ಬಗ್ಗೆ ರೇಶ್ಮಾ ತಾಯಿ ಯಶೋಧಾ ಬರ್ಕೆ ಠಾಣೆಯಲ್ಲಿ ಮಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ABOUT THE AUTHOR

...view details