ಮಂಗಳೂರು:ಇಲ್ಲಿನ ಅಶೋಕನಗರದ ಸೇಂಟ್ ಡೊಮಿನಿಕ್ ಚರ್ಚ್ ಬಳಿಯ ಆರಾಧನಾ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಕೊಠಡಿಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ.
ಕೀರಪ್ಪ ಅವರ ಪತ್ನಿ ರೇಣುಕಾ (24) ಮತ್ತು ಮಕ್ಕಳಾದ ಮೇಘನಾ (5) ಹಾಗೂ ಮನೋಜ್ (4) ಅವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೇ 21ರಂದು ಸಂಜೆ 5 ಗಂಟೆಗೆ ಉರ್ವ ಮಾರಿಯಮ್ಮ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿದ ರೇಣುಕಾ, ಇಬ್ಬರು ಮಕ್ಕಳ ಜತೆ ಮನೆಯಿಂದ ಹೊರಟು ಹೋದವರು ಹಿಂದಿರುಗಿ ಬಾರದೇ ಕಾಣೆಯಾಗಿದ್ದಾರೆ. ಈ ಬಗ್ಗೆ ವಿವಿಧೆಡೆ ಹುಡುಕಾಡಿ ಎಲ್ಲಿಯೂ ಪತ್ತೆಯಾಗದ ಕಾರಣ ಮೇ 24 ರಂದು ಕೀರಪ್ಪ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.