ಕರ್ನಾಟಕ

karnataka

ETV Bharat / state

ಮಂಗಳೂರಿನಿಂದ ನಾಪತ್ತೆಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ.. ಪರಾರಿ ಆಗಿದ್ದಕ್ಕೆ ಕಾರಣ ಬಹಿರಂಗ

ಮಂಗಳೂರಿನ ಕಾಲೇಜೊಂದರಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ವಿದ್ಯಾರ್ಥಿನಿಯರನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

Etv Bharatmissing-mangaluru-college-students-found-in-chennai
Etv Bharatಪರೀಕ್ಷೆಯಲ್ಲಿ ಕಡಿಮೆ ಅಂಕ: ಮಂಗಳೂರಿನಿಂದ ನಾಪತ್ತೆಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

By

Published : Sep 24, 2022, 12:44 PM IST

Updated : Sep 24, 2022, 3:49 PM IST

ಮಂಗಳೂರು:ಮಂಗಳೂರಿನಲ್ಲಿ ನಾಪತ್ತೆಯಾಗಿದ್ದ ಮೇರಿಹಿಲ್​ನ ಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 21ರಂದು ಮುಂಜಾನೆ 3 ಗಂಟೆಗೆ ಕಾಲೇಜಿನ ಪ್ರಥಮ ಪಿಯುಸಿಯ ಮೂವರು ಕಾಲೇಜ್ ಹಾಸ್ಟೆಲ್​ನ ಕಿಟಕಿ ಮುರಿದು ಪರಾರಿಯಾಗಿದ್ದರು.

ವಿದ್ಯಾರ್ಥಿನಿಯರು ಕಾಲೇಜ್ ಹಾಸ್ಟೆಲ್​ ಹೊರಭಾಗದ ಮುಖ್ಯರಸ್ತೆಯಲ್ಲಿ ಒಟ್ಟಿಗೆ ನಡೆದಾಡಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಮೂವರು ನಾಪತ್ತೆಯಾದ ಬಳಿಕ ಎಲ್ಲಿ ಹೋಗಿದ್ದಾರೆ ಎಂಬುದು ಆತಂಕ ಸೃಷ್ಟಿಸಿತ್ತು. ಈ ವಿದ್ಯಾರ್ಥಿನಿಯರು ಶುಕ್ರವಾರ ಸಂಜೆ ಚೆನ್ನೈ ಪೊಲೀಸ್ ಠಾಣೆಯಲ್ಲಿ ಹಾಜರಾಗಿ, ನಾವು ಮಂಗಳೂರಿನಿಂದ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಇಂದು ಅವರನ್ನು ಮಂಗಳೂರಿಗೆ ಕರೆದುಕೊಂಡು ಬರಲಾಗಿದೆ.

ಮಂಗಳೂರಿನಿಂದ ನಾಪತ್ತೆಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ವಿದ್ಯಾರ್ಥಿನಿಯರು ಇತ್ತೀಚೆಗೆ ನಡೆದ ಪ್ರಥಮ ಪಿಯುಸಿಯ ಯುನಿಟ್ ಪರೀಕ್ಷೆಯೊಂದರಲ್ಲಿ ಕಡಿಮೆ ಅಂಕ ಪಡೆದಿದ್ದರು. ಇದರಿಂದ ಮನೆಯವರಿಗೆ ಯಾವ ರೀತಿ ಉತ್ತರಿಸುವುದು ಎಂದು ತಿಳಿಯದೆ ಪರಾರಿಯಾಗಲು ನಿರ್ಧರಿಸಿದ್ದರು. ಮೂವರಲ್ಲಿ ಓರ್ವ ವಿದ್ಯಾರ್ಥಿನಿಯ ಸಂಬಂಧಿಕರು ಚೆನ್ನೈನಲ್ಲಿ ಇರುವುದರಿಂದ ಇವರು ರೈಲಿನಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಚೆನ್ನೈಗೆ ಹೋದ ಬಳಿಕ ಅವರಿಗೆ ಮನೆಯವರು ಆತಂಕಗೊಂಡಿರಬಹುದು ಎಂಬುದು ಅರಿವಾಗಿದೆ. ಅಲ್ಲೇ ಸುತ್ತಾಡಿ ರಿಕ್ಷಾದಲ್ಲಿ ಚೆನ್ನೈ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಪೊಲೀಸರಿಗೆ ನಡೆದ ವಿಚಾರ ತಿಳಿಸಿದ್ದು, ಅವರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿದ್ಯಾರ್ಥಿನಿಯರು ಪತ್ತೆಯಾದ ಬಳಿಕ ಮಂಗಳೂರು ನಗರ ಪೊಲೀಸ್ ಕಮಿಷನರ್, ವಿದ್ಯಾರ್ಥಿನಿಯರ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಯ ಜೊತೆಗೆ ಮಾತನಾಡಿ, ವಿದ್ಯಾರ್ಥಿನಿಯರ ಜೊತೆಗೆ ಕೌನ್ಸಿಲಿಂಗ್ ನಡೆಸುವಂತೆ ಸಲಹೆ ನೀಡಿದರು. ವಿದ್ಯಾರ್ಥಿನಿಯರು ಪತ್ತೆಯಾಗಿದ್ದರಿಂದ ನಗರದಲ್ಲಿ ಆತಂಕ ಸೃಷ್ಟಿಸಿದ್ದ ಪ್ರಕರಣವು ಸುಖಾಂತ್ಯ ಕಂಡಿದೆ.

ಇದನ್ನೂ ಓದಿ:ಮಂಗಳೂರು: ಹಾಸ್ಟೆಲ್​ ಕಿಟಕಿ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ

Last Updated : Sep 24, 2022, 3:49 PM IST

ABOUT THE AUTHOR

...view details