ಕಡಬ: ನಾಪತ್ತೆಯಾಗಿದ್ದ ತಾಲೂಕಿನ ಶ್ರೀ ರಾಮಕುಂಜೇಶ್ವರ ವಸತಿ ನಿಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಇದೀಗ ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ.
ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಂ (16) ನಿನ್ನೆ ಬೆಳಗ್ಗೆ 9 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹಾಸ್ಟೇಲ್ನಿಂದ ಹೋಗಿದ್ದು, ಕಾಲೇಜಿಗೂ ಹೋಗದೆ, ಮನೆಗೂ ತೆರಳಿರಲ್ಲ. ಮಧ್ಯಾಹ್ನ ಇತರ ವಿದ್ಯಾರ್ಥಿಗಳು ಊಟಕ್ಕೆ ವಸತಿ ನಿಲಯಕ್ಕೆ ಬಂದಾಗ ಅಂಜನ್ ಕಾಲೇಜಿಗೆ ಹೋಗದೆ ಇರುವ ವಿಚಾರವನ್ನು ಮ್ಯಾನೇಜರ್ ಗಮನಕ್ಕೆ ತಂದಿದ್ದರು.