ಸುಳ್ಯ (ದಕ್ಷಿಣ ಕನ್ನಡ): ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವ ಜೋಡಿಯೊಂದು ಮದುವೆಯಾಗಿ ಬೆಂಗಳೂರಿನ ನೆಲಮಂಗಲ ಕಡೆ ಪತ್ತೆಯಾಗಿದೆ. ಸುಳ್ಯದ ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿ ಲಿಖಿತಾ ಮತ್ತು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ಗೌಡಮನೆಯ ಅಭಿಲಾಷ್ ಎಂಬುವವರು ಕೆಲವು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು.
ನಾಪತ್ತೆಯಾಗಿದ್ದ ಯುವಕ, ಯುವತಿ ಮದುವೆಯಾಗಿ ಬೆಂಗಳೂರಿನಲ್ಲಿ ಪತ್ತೆ - couple married
ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವ ಜೋಡಿಯೊಂದು ಮದುವೆಯಾಗಿ ಪತ್ತೆಯಾಗಿದ್ದು, ಇವರಿಬ್ಬರ ಮೇಲೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು
ಯುವಜೋಡಿ ಪತ್ತೆ
ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿತ್ತು. ಇದೀಗ ಸುಬ್ರಹ್ಮಣ್ಯ ಪೊಲೀಸರು ನೆಟ್ವರ್ಕ್ ಆಧಾರದಲ್ಲಿ ಬೆಂಗಳೂರಿನಲ್ಲಿ ಇವರನ್ನು ಪತ್ತೆ ಹಚ್ಚಿದ್ದು, ಇವರಿಬ್ಬರು ಮದುವೆಯಾಗಿರುವುದಾಗಿ ತಿಳಿದು ಬಂದಿದೆ.