ಕರ್ನಾಟಕ

karnataka

ETV Bharat / state

ದೇರಳಕಟ್ಟೆ ಫ್ಲಾಟ್​ನಲ್ಲಿ ಅಗ್ನಿ ಅವಘಢ: ಮ್ಯಾನೇಜರ್ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ - ETV Bharath Kannada news

ದೇರಳಕಟ್ಟೆಯ ಫ್ಲಾಟ್ ಒಂದರಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ಫ್ಲಾಟ್​ನ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ.

fire accident
ಮಹಮ್ಮದ್ ಶಾಹಿದ್ ಶಫೀಕ್

By

Published : Dec 21, 2022, 2:43 PM IST

ದೇರಳಕಟ್ಟೆ ಫ್ಲಾಟ್​ನಲ್ಲಿ ತಪ್ಪಿದ ಅಗ್ನಿ ಅವಘಢ

ಉಳ್ಳಾಲ(ದಕ್ಷಿನ ಕನ್ನಡ): ದೇರಳಕಟ್ಟೆ ಎರಡು ಆಸ್ಪತ್ರೆಗಳ ನಡುವೆ ಇರುವ ಫ್ಲಾಟ್ ಒಂದರಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಫ್ಲಾಟ್​ನ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ 100ಕ್ಕೂ ಅಧಿಕ ಮಂದಿಯಿರುವ 13 ಮಹಡಿಗಳ ಫ್ಲಾಟ್​ನ ಅಗ್ನಿ ದುರಂತ ತಪ್ಪಿದೆ. ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಫ್ಲಾಟ್​ನಲ್ಲಿ ಅಗ್ನಿ ಅವಘಢ ಸಂಭವಿಸಿರುವುದು.

ಘಟನೆ ವಿವರ: ಫ್ಲಾಟ್​ನ 202ರ ರೂಮಿನಲ್ಲಿ ದಂತ ವೈದ್ಯಕೀಯ ಕಲಿಯುವ ಇಬ್ಬರು ವಿದ್ಯಾರ್ಥಿನಿಯರಿದ್ದು, ಡಿ.20ರ ಬೆಳಿಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರ ಇದೆಯೆಂದು ಬೇಗನೇ ತೆರಳಿದ್ದರು. ಆದರೆ ಆತುರದಲ್ಲಿ ಬಟ್ಟೆಗಳಿಗೆ ಇಸ್ತ್ರಿ ಹಾಕಿರುವ ವಿದ್ಯಾರ್ಥಿನಿಯರು, ಸ್ವಿಚ್ ಆಫ್ ಮಾಡಿದರೂ, ಇಸ್ತ್ರಿ ಪೆಟ್ಟಿಗೆಯನ್ನು ಮಲಗುವ ಬೆಡ್​ನಲ್ಲಿರಿಸಿ ಕಾಲೇಜಿಗೆ ತೆರಳಿದ್ದರು.

ಆದರೆ ಬೆಳಗಿನಿಂದ ಹೊಗೆಯ ವಾಸನೆ ಫ್ಲಾಟ್ ತುಂಬಾ ಬರುತ್ತಿರುವುದನ್ನು ಮ್ಯಾನೇಜರ್ ಮಹಮ್ಮದ್ ಶಾಹಿದ್ ಶಫೀಕ್ ಫ್ಲಾಟ್​ಗಳನ್ನು ಪರೀಕ್ಷಿಸುವಾಗ 202ರಲ್ಲಿ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ವಾಪಸ್​ ಬರುವಂತೆ ಹೇಳಿದ್ದಾರೆ. ಫ್ಲಾಟ್ ನತ್ತ ಬಂದ ವಿದ್ಯಾರ್ಥಿನಿಯರು ಬಾಗಿಲು ತೆರೆದಾಗ ರೂಮ್​​ ತುಂಬಾ ಹೊಗೆ ತುಂಬಿಕೊಂಡಿದೆ.

ಶಾಹಿದ್ ಶಫೀಕ್ ಒಳಗಡೆ ಹೋಗಿ ನೋಡಿದಾಗ ಬೆಡ್​ಗೆ ಬೆಂಕಿ ತಗುಲಿರುವುದ ಬೆಳಕಿಗೆ ಬಂದಿದೆ. ವಾಚ್‌ಮ್ಯಾನ್ ಲೋಕೇಶ್​ ಅವರೊಂದಿಗೆ ಸೇರಿ ಬೆಡ್​ ಹೊರಹಾಕಿ ಅಗ್ನಿ ಅವಘಡವನ್ನು ತಪ್ಪಿಸಿದ್ದಾರೆ.

ಇದನ್ನೂ ಓದಿ:ಫಿಫಾ ಫೈನಲ್​ನೊಂದಿಗೆ ಎಣ್ಣೆ​ ಕಿಕ್​.. ಒಂದೇ ದಿನ ಮದ್ಯ ಮಾರಾಟದಿಂದ ತುಂಬಿತು ಕೇರಳದ ಖಜಾನೆ

ABOUT THE AUTHOR

...view details