ಮಂಗಳೂರು: ನಗರದ ಶ್ರೀಕ್ಷೇತ್ರ ಕುಡುಪು ಅನಂತಪದ್ಮನಾಭ ದೇವಾಲಯದಲ್ಲಿ ನಾಗರಪಂಚಮಿಯಂದು ಭಕ್ತರ ಭೇಟಿಗೆ ನಿರ್ಬಂಧ ಹೇರಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾಗಿರುವ ಮಾತು. ಇಂತಹ ಯಾವುದೇ ಸುದ್ದಿ ದೇವಾಲಯದಿಂದ ಪ್ರಕಟಣೆಗೊಂಡಿಲ್ಲ ಎಂದು ಮುಜರಾಯಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕುಡುಪು ಶ್ರೀಕ್ಷೇತ್ರಕ್ಕೆ ಭಕ್ತರ ಭೇಟಿ ನಿರ್ಬಂಧ ಪ್ರಕಟಣೆ ಅಸಲಿಯಲ್ಲ; ಸ್ಪಷ್ಟನೆ - Kudupu Shrikshetra
ಶ್ರೀಕ್ಷೇತ್ರ ಕುಡುಪು ಅನಂತಪದ್ಮನಾಭ ದೇವಾಲಯದಲ್ಲಿ ನಾಗರಪಂಚಮಿಯಂದು ಭಕ್ತರ ಭೇಟಿಗೆ ನಿರ್ಬಂಧ ಹೇರಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಜರಾಯಿ ಅಧಿಕಾರಿಗಳು ಇದು ಸುಳ್ಳು ಸುದ್ದಿ ಎಂದಿದ್ದಾರೆ.
'ಶ್ರೀಕ್ಷೇತ್ರದಲ್ಲಿ ಪ್ರತೀ ವರ್ಷ ಆಚರಿಸುವ ನಾಗರಪಂಚಮಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರಲಿದ್ದಾರೆ. ಜುಲೈ 25 ರಂದು ನಾಗರಪಂಚಮಿ ಹಬ್ಬವಿದ್ದು, ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಕ್ತಾದಿಗಳಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಲಿದೆ. ಆದ್ದರಿಂದ ಅಂದು ದೇವಸ್ಥಾನಕ್ಕೆ ಭಕ್ತಾದಿಗಳ ಭೇಟಿಯನ್ನು ನಿರ್ಬಂಧಿಸಲಾಗಿದೆ. ಅಂದು ದೇವಸ್ಥಾನದಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ, ತೀರ್ಥ, ಮತ್ತು ಅನ್ನಸಂತರ್ಪಣೆ ಇರೋದಿಲ್ಲ. ಮುಂದಿನ ದಿನಗಳಲ್ಲಿ ಭಕ್ತಾದಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು' ಎಂಬ ಸುಳ್ಳು ಪ್ರಕಟಣೆ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆದರೆ ಇದನ್ನು ಅಲ್ಲಗೆಳೆದಿರುವ ಮುಜರಾಯಿ ಅಧಿಕಾರಿಗಳು ಈ ರೀತಿಯ ಯಾವುದೇ ಪ್ರಕಟಣೆಯನ್ನು ದೇವಸ್ಥಾನದಿಂದ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.