ಕರ್ನಾಟಕ

karnataka

ETV Bharat / state

ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕ - ಮಂಗಳೂರಿನಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ ದಾಖಲು,

ಮದುವೆಯಾಗುವುದಾಗಿ ಬಾಲಕಿಯನ್ನು ನಂಬಿಸಿ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಮಂಗಳೂರಿನ ಪುತ್ತೂರಿನಲ್ಲಿ ನಡೆದಿದೆ.

minor rape, minor rape case, minor rape case in Mangaluru, Mangaluru crime news, ಬಾಲಕಿ ಅತ್ಯಾಚಾರ, ಬಾಲಕಿ ಅತ್ಯಾಚಾರ ಪ್ರಕರಣ, ಮಂಗಳೂರಿನಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ ದಾಖಲು, ಮಂಗಳೂರು ಅಪರಾಧ ಸುದ್ದಿ,
ಬಾಲಕಿಯ ಅತ್ಯಾಚಾರ

By

Published : Nov 7, 2021, 1:27 AM IST

ಮಂಗಳೂರು;ಬಾಲಕಿಗೆ ಮದುವೆಯಾಗುವ ಭರವಸೆ ನೀಡಿ ಯುವಕನೊಬ್ಬ ಅತ್ಯಾಚಾರ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬಾಲಕಿ ಕೊರೊನಾ ಸಂದರ್ಭದಲ್ಲಿ ಕೇರಳ ರಾಜ್ಯದ ಕಾಸರಗೋಡಿನ ತಾಯಿ ಮನೆಗೆ ಬಂದಿದ್ದಳು. ಈ ವೇಳೆ ಕಾಸರಗೋಡು ವಿದ್ಯಾನಗರದ ಜುಬೈರ್ ಎಂಬಾತನು ಬಾಲಕಿಯನ್ನು ನೋಡಿ ಆಕೆಯ ತಾಯಿಯಲ್ಲಿ ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ. ಆಕೆಯ ತಾಯಿ ಮಗಳಿಗೆ 18 ವರ್ಷ ಕಳೆದ ಬಳಿಕ ಮದುವೆ ಮಾಡುವುದಾಗಿ ತಿಳಿಸಿದ್ದಾರೆ. ಆ ನಂತರ ಬಾಲಕಿಯೊಂದಿಗೆ ಜುಬೈರ್ ಫೋನ್ ಮೂಲಕ ಪರಿಚಯ ಬೆಳಿಸಿಕೊಂಡಿದ್ದಾನೆ.

ಜುಲೈ ತಿಂಗಳಲ್ಲಿ ಬಾಲಕಿ ಪುತ್ತೂರಿನ ಮನೆಯೊಂದರಲ್ಲಿ ವಾಸವಿದ್ದಳು. ಈ ವೇಳೆ ಮಧ್ಯೆ ರಾತ್ರಿ ಜುಬೈರ್​ ಬಾಲಕಿಯ ಮನೆ ಬಳಿ ತೆರಳಿ ಬಾಗಿಲು ತೆರೆಯುವಂತೆ ಮೊಬೈಲ್​ಗೆ ಸಂದೇಶ ರವಾನಿಸಿದ್ದಾನೆ. ಜುಬೈರ್​ ಮಾತು ಕೇಳಿ ಬಾಲಕಿ ಮನೆಯ ಬಾಗಿಲು ತೆಗೆದಿದ್ದಾಳೆ. ಬಳಿಕ ಜುಬೈರ್​ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಮುಂದೆಯು ಮನೆಗೆ ಬರುವುದಾಗಿ ಜುಬೈರ್ ಹೇಳಿದಾಗ ಬಾಲಕಿ ಇದಕ್ಕೆ ನಿರಾಕರಿಸಿದ್ದಾಲೆ. ಈ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಈ ವಿಚಾರ ಬಾಲಕಿ ತಾಯಿಗೆ ಹೇಳಿದ್ದಾಳೆ. ಕೂಡಲೇ ಬಾಲಕಿ ತಾಯಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಘಟನೆ ಕುರಿತು ಜುಬೈರ್​ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details