ಕರ್ನಾಟಕ

karnataka

ETV Bharat / state

ಕಾಂಗ್ರೆಸ್, ಕಮ್ಯೂನಿಸ್ಟ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ: ಸಚಿವ ಸುನೀಲ್ ಕುಮಾರ್ - ವಿದ್ಯುತ್ ಬೆಲೆ ಏರಿಕೆ ಬಗ್ಗೆ ಸಚಿವ ಸುನೀಲ್ ಕುಮಾರ್​ ಆಕ್ರೋಶ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಲು ಅವರಿಗೆ ಆಗುತ್ತಿಲ್ಲ.‌ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಭಿವೃದ್ಧಿ ವಿಚಾರಗಳಿಗೆ ವೇಗವನ್ನು ಕೊಡುವಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

minister-sunil-kumar
ಸಚಿವ ಸುನೀಲ್ ಕುಮಾರ್

By

Published : Jan 23, 2022, 10:52 PM IST

ಬೆಳ್ತಂಗಡಿ: ವಿದ್ಯುತ್ ಬೆಲೆ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಇವತ್ತು ವಿನಾಕಾರಣ ಸಮಾಜವನ್ನು ಒಡೆಯುವಂತಹ ಕೆಲಸವನ್ನು ಕಾಂಗ್ರೆಸ್ ಬೇರೆ ಬೇರೆ ಹಂತಗಳಲ್ಲಿ ಮಾಡುತ್ತಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾದ್ಯಮದ ಜೊತೆ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಲು ಅವರಿಗೆ ಆಗುತ್ತಿಲ್ಲ.‌ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಭಿವೃದ್ಧಿ ವಿಚಾರಗಳಿಗೆ ವೇಗವನ್ನು ಕೊಡುವಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಸಚಿವ ಸುನೀಲ್ ಕುಮಾರ್ ಮಾತನಾಡಿದರು

ಲೋಕೋಪಯೋಗಿ ಇಲಾಖೆಯಲ್ಲಿ ರಾಜ್ಯ ಹೆದ್ದಾರಿಗಳಿಗೆ ಸುಮಾರು ₹3500 ಸಾವಿರ ಕೋಟಿ ಅನುದಾನ ಕೊಟ್ಟಿದ್ದು, ನಗರಾಭಿವೃದ್ಧಿ ಯೋಜನೆಯ ಮುಖಾಂತರ ರಾಜ್ಯದ ಎಲ್ಲಾ ಪುರಸಭೆ, ಪಟ್ಟಣ ಪಂಚಾಯತ್​ಗಳಿಗೆ ಹೆಚ್ಚಿನ ಅನುದಾನಗಳನ್ನು ನೀಡುವ ಮೂಲಕ ಅಭಿವೃದ್ಧಿ ಚಟುವಟಿಕೆಗಳಿಗೆ ಹೊಸ ಆಯಾಮ ಕೊಡುವ ಪ್ರಯತ್ನ ಮಾಡುತಿದ್ದಾರೆ. ಇದನ್ನೆಲ್ಲ ಸಹಿಸದ ಕಾಂಗ್ರೆಸ್ ಬೇರೆ ಬೇರೆ ವಿಚಾರಗಳನ್ನು ಹಿಡಿದುಕೊಂಡು ಸಮಾಜವನ್ನು ಒಡೆಯುಂತಹ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕೇರಳದಲ್ಲಿ ಕಮ್ಯೂನಿಸ್ಟ್‌ ಸರ್ಕಾರ ನಿಯಾಮವಳಿಗಳಲ್ಲಿ ಉದ್ದೇಶಪೂರ್ವಕವಾಗಿ ಮಾಡಿರುವಂತಹ ತಪ್ಪುಗಳು. ಅವರು ಶಂಕರಾಚಾರ್ಯರ ಜಟಾಯು, ನಾರಾಯಣ ಗುರುಗಳ ಸ್ತಬ್ಧ ಚಿತ್ರಗಳ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕಳುಹಿಸಿಕೊಟ್ಟು, ತಿರಸ್ಕಾರ ಮಾಡಲು ಬೇಕಾದಂತಹ ಎಲ್ಲ ಸಿದ್ಧತೆಗಳನ್ನು ಕಮ್ಯೂನಿಸ್ಟ್‌ ಸರ್ಕಾರವೇ ಸ್ವತಃ ಸೃಷ್ಟಿಸಿಕೊಂಡು ನಾರಾಯಣ ಗುರುಗಳಿಗೆ ಅಪಮಾನವಾಗಿದೆ ಎನ್ನುವಂತಹ ವಿವಾದವನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿದರು.

ನಾರಾಯಣ ಗುರುಗಳ ಬಗ್ಗೆ ಅಪಾರವಾದ ಗೌರವವನ್ನು ಇಡೀ ಸಮಾಜ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಮೊದಲ ಬಾರಿ ಹೋದ ಸಂದರ್ಭದಲ್ಲಿ ನಾರಾಯಣ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಪರಮ ಪೂಜ್ಯ ಸ್ವಾಮೀಜಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ಬಿಜೆಪಿ ಸರ್ಕಾರ ಬಂದ ನಂತರ. ಈ ರೀತಿ ಅಪಾರವಾದ ಗೌರವವನ್ನು ನಮ್ಮ ಸರ್ಕಾರ ನೀಡಿದೆ. ಆದರೆ, ಇವತ್ತು ಕೇರಳ ಸರ್ಕಾರ ಮಾಡಿದ ಗೊಂದಲವನ್ನು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಎತ್ತಿಕೊಂಡಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಮೂಲಕ ಕಾಂಗ್ರೆಸ್ಸಿಗರಿಗೆ ನನ್ನ ಪ್ರಶ್ನೆ ಏನೆಂದರೆ ಲೇಡಿ ಹಿಲ್ ಸರ್ಕಲ್​ ಅನ್ನು ನಾರಾಯಣಗುರು ವೃತ್ತ ಮಾಡಬೇಕೆಂದು ಬಿಜೆಪಿ ಮಹಾನಗರ ಪಾಲಿಕೆ ನಿರ್ಣಯವನ್ನು ಕೈಗೊಂಡಾಗ ಅವತ್ತು ಇಲ್ಲಿ ಇರುವಂತಹ ಕಾಂಗ್ರೆಸ್ಸಿಗರು ವಿರೋಧ ಮಾಡಿದ್ದರು. ದಾಖಲೆಗಳಲ್ಲಿ ಅದನ್ನು ವ್ಯಕ್ತಪಡಿಸಿದರು.

ಅವತ್ತು ಇದಕ್ಕೆ ವಿರೋಧ ಮಾಡಿದವರು ಈಗ ಏಕಾಏಕಿ ನಾರಾಯಣ ಗುರುಗಳಿಗೆ ಪ್ರೀತಿಯನ್ನು ತೋರಿಸುತ್ತಿರುವುದು ಯಾವ ಸಮಾಜವನ್ನು ಒಡೆಯುವ ಪ್ರಯತ್ನ? ಎಂದು ಸಚಿವರು ಪ್ರಶ್ನಿಸಿದರು. ಸಮಾಜ ಒಡೆಯುವಂತಹ ಕಮ್ಯೂನಿಸ್ಟ್‌ ಕುತಂತ್ರಕ್ಕೆ ಸಮಾಜ ಬಲಿಯಾಗಬಾರದು ಎಂದು ವಿನಂತಿ ಮಾಡುತ್ತ ನಾರಾಯಣ ಗುರುಗಳಿಗೆ ಗೌರವವನ್ನು ನೀಡುವ ನಿಟ್ಟಿನಲ್ಲಿ ಬೇರೆ ಬೇರೆ ಸಂಘಟನೆಗಳು ಗಣರಾಜ್ಯೋತ್ಸವದ ದಿನ ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಎಂದರು.

ನಾರಾಯಣ ಗುರುಗಳಿಗೆ ಗೌರವಯುತವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಸ್ವಾಗತಿಸಿ ಬೆಂಬಲಿಸುತ್ತೇನೆ. ಆದರೆ, ಅವರ ಹೆಸರಿನಡಿಯಲ್ಲಿ ಕಮ್ಯೂನಿಸ್ಟ್‌ ಮತ್ತು ಕಾಂಗ್ರೆಸ್‌ ಮಾಡುತ್ತಿರುವ ಕುತಂತ್ರಕ್ಕೆ ಸಮಾಜ ಬಲಿಯಾಗಬಾರದು ಎಂಬ ವಿನಂತಿಯನ್ನು ಈ ಮೂಲಕ ಮಾಡುತ್ತೇನೆ ಎಂದು ತಿಳಿಸಿದರು.

ಓದಿ:ಮುದ್ದೇಬಿಹಾಳ ಪಿಎಸ್​ಐ ವೈರಲ್ ಆಡಿಯೋದಲ್ಲಿ ಕೇಳಿಬಂದ ಸಾಹೆಬ್ರು ಯಾರು.. ಜೆಡಿಎಸ್ ನಾಯಕಿ ಪ್ರಶ್ನೆ

For All Latest Updates

TAGGED:

ABOUT THE AUTHOR

...view details