ಕರ್ನಾಟಕ

karnataka

ETV Bharat / state

ಕೇರಳದಲ್ಲಿನ ಬೆಂಕಿಯ ಶಾಖವನ್ನು ದ.ಕ.ಜಿಲ್ಲೆಯಲ್ಲಿ ಬೇಯಿಸುವ ಪ್ರಯತ್ನವನ್ನು ಕಾಂಗ್ರೆಸ್​​ ಮಾಡುತ್ತಿದೆ: ಸಚಿವ ಸುನಿಲ್ ಕುಮಾರ್ - ಕಾಂಗ್ರೆಸ್​ಗೆ ಅಭದ್ರತೆ ಕಾಡುತ್ತಿದೆ ಎಂದ ಸಚಿವ ಸುನಿಲ್ ಕುಮಾರ್

ನಾರಾಯಣ ಗುರುಗಳು ಒಂದು ಜಾತಿ, ವ್ಯವಸ್ಥೆಗೆ ಸೀಮಿತರಾದವರಲ್ಲ. ಎಲ್ಲವನ್ನೂ ಮೀರಿ ನಿಂತವರು. ಆ ಕಾರಣಕ್ಕೆ ಅವರು ಮಹಾ‌ ಪುರುಷರಾದರು. ಆದರೆ ರಾಜಕೀಯ ಉದ್ದೇಶಕ್ಕೋಸ್ಕರ ಕಮ್ಯುನಿಸ್ಟರು, ಕಾಂಗ್ರೆಸ್​ನವರು ಬಳಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

Minister Sunil Kumar
ಸಚಿವ ಸುನಿಲ್ ಕುಮಾರ್

By

Published : Jan 26, 2022, 6:00 PM IST

ಮಂಗಳೂರು:ನಾರಾಯಣ ಗುರುಗಳ ಸ್ತಬ್ಧಚಿತ್ರ ರದ್ದುಗೊಳಿಸಿರುವ ಹಿನ್ನೆಲೆ ಕೇರಳದಲ್ಲಿ ಆಗಿರುವ ಬೆಂಕಿಯ ಶಾಖವನ್ನು ದ‌ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಯಿಸುವ ಪ್ರಯತ್ನವನ್ನು ಕಾಂಗ್ರೆಸಿಗರು ಮಾಡುತ್ತಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಇಂದು ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ವಿವಿಧ ಬಿಲ್ಲವ ಸಂಘಟನೆಗಳು ಮಾಡುತ್ತಿರುವ ನಾರಾಯಣ ಗುರುಗಳ ಸ್ವಾಭಿಮಾನ ಜಾಥಾ ಯಾರ ವಿರುದ್ಧವೂ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನಾವು ಅದಕ್ಕೆ ಬೆಂಬಲ ಕೊಡುತ್ತಿದ್ದೇವೆ ಎಂದು ಹೇಳಿದರು.

ಸಚಿವ ಸುನಿಲ್ ಕುಮಾರ್

ನಾರಾಯಣ ಗುರುಗಳು ಒಂದು ಜಾತಿ, ವ್ಯವಸ್ಥೆಗೆ ಸೀಮಿತರಾದವರಲ್ಲ. ಎಲ್ಲವನ್ನೂ ಮೀರಿ ನಿಂತವರು. ಆ ಕಾರಣಕ್ಕೆ ಅವರು ಮಹಾ‌ ಪುರುಷರಾದರು. ಆದರೆ ರಾಜಕೀಯ ಉದ್ದೇಶಕ್ಕೋಸ್ಕರ ಕಮ್ಯುನಿಸ್ಟರು, ಕಾಂಗ್ರೆಸ್​ನವರು ಅವರ ಹೆಸರನ್ನು ಬಳಕೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನಾರಾಯಣ ಗುರುಗಳನ್ನು ಯಾರೂ ರಾಜಕೀಯಕ್ಕೆ ಬಳಸಬಾರದು. ಈ ಹಿನ್ನೆಲೆ ಟ್ಯಾಬ್ಲೋವನ್ನು ಗೌರವಿಸುತ್ತೇನೆ, ಹಾಗೆಯೇ ಸ್ವಾಗತಿಸುತ್ತೇನೆ ಎಂದರು.

ಇದನ್ನೂ ಓದಿ;ಅರ್ಧ ದಿನ ಕೂಲಿ ಮಾಡಿ, ಅರ್ಧ ದಿನ ಸುರಂಗ ಕೊರೆಯುತ್ತಿದ್ದ ಶ್ರಮಜೀವಿ.. ದಕ್ಷಿಣ ಕನ್ನಡದ ಈ 'ಭಗೀರಥ'ನ ಬದುಕೇ ರೋಚಕ!

ಕಮ್ಯೂನಿಸ್ಟರು ಮತ್ತು ಕಾಂಗ್ರೆಸ್​ನವರು ಗೊಂದಲ ಸೃಷ್ಟಿಸಿರುವುದನ್ನು ನಾವು ಮಾಡಬಾರದು. ಮಂಗಳೂರಿನ ಲೇಡಿಹಿಲ್ ಸರ್ಕಲ್​ಗೆ ನಾರಾಯಣ ಗುರುಗಳ ಹೆಸರನ್ನು ಮರುನಾಮಕರಣ ಮಾಡಲು ಬಿಜೆಪಿ ಜಿಲ್ಲಾಡಳಿತ ಉದ್ದೇಶಿಸಿದಾಗ ಕಾಂಗ್ರೆಸಿನ ಹೆಚ್ಚಿನ ಸದಸ್ಯರು ಲಿಖಿತವಾಗಿ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಅಂದು ಈ ಮೂಲಕ ಅಪಮಾನ ಮಾಡಿದ ಕಾಂಗ್ರೆಸ್​ನವರಿಂದ ನಾರಾಯಣ ಗುರುಗಳಿಗೆ ಅಪಮಾನ ಆಗಿದೆ ಎನ್ನುತ್ತಿರುವುದು ವಿಪರ್ಯಾಸ. ಅಂದರೆ ಸ್ತಬ್ಧಚಿತ್ರ ತಿರಸ್ಕಾರವನ್ನು ರಾಜಕೀಕರಣಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಸುನಿಲ್ ಕುಮಾರ್ ಹೇಳಿದರು.

ಯಾವ ಪಕ್ಷಕ್ಕೆ ಅಭದ್ರತೆ ಕಾಡುತ್ತದೆಯೋ ಅವರು ಅದರಿಂದ ಹೊರಬರಲು ಯತ್ನಿಸುತ್ತಿರುತ್ತಾರೆ‌. ಕಾಂಗ್ರೆಸ್​ಗೆ ಅಭದ್ರತೆ ಕಾಡುತ್ತಿದೆ. ಕಾಂಗ್ರೆಸ್ ದೇಶದಲ್ಲಿ ಮಾತ್ರವಲ್ಲ, ರಾಜ್ಯದಲ್ಲೂ ಖಾಲಿಯಾಗಲು ಪ್ರಾರಂಭವಾಗಿದೆ. ನಾಡಿದ್ದಿನ ನಾಲ್ಕು ರಾಜ್ಯಗಳ ಉಪಚುನಾವಣೆ, ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗುತ್ತದೆ ಎಂದು ನೋಡಿ. ಕಾಂಗ್ರೆಸ್ ಒಡೆದ ಮನೆಯಾಗಿದೆ. ನಾವು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಕರ್ನಾಟಕದಲ್ಲಿ ಸರ್ಕಾರವನ್ನು ನಡೆಸುತ್ತೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details