ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಸರ್ಕಾರ ಹೇಳಿಕೆ: ಖಾದರ್ ಹೇಳಿಕೆಗೆ ಸುನೀಲ್ ಕುಮಾರ್ ತಿರುಗೇಟು - ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಸುನೀಲ್ ಕುಮಾರ್

ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹಿಂದೂ ಯುವಕನ ಹತ್ಯೆಯಾಗಿತ್ತು. ಮಂಗಳೂರಿನಲ್ಲಿ ಇದ್ದರೂ ಮುಖ್ಯಮಂತ್ರಿಗಳು ಹತ್ಯೆಯಾದ ಯುವಕನ ಮನೆಗೆ ಹೋಗಿ ಭೇಟಿಯಾಗಿಲ್ಲ ಎಂದೂ ಸುನೀಲ್ ಕುಮಾರ್ ಕಿಡಿಕಾರಿದರು.

Kannada and Culture Minister Sunil Kumar
ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಸುನೀಲ್ ಕುಮಾರ್

By

Published : May 17, 2022, 6:18 PM IST

Updated : May 17, 2022, 6:57 PM IST

ಪುತ್ತೂರು (ದಕ್ಷಿಣ ಕನ್ನಡ):ರಾಜ್ಯದಲ್ಲಿಶಾಲಾ ವಿದ್ಯಾರ್ಥಿಗಳಿಗೆ ರೈಫಲ್ ತರಬೇತಿ ನೀಡುವಂತ ತಾಲಿಬಾನ್ ಸಂಸ್ಕೃತಿಯ ಸರ್ಕಾರ ಇದೆ ಎಂಬ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿಕೆಗೆ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಾಲಿಬಾನ್ ಸಂಸ್ಕತಿಯ ಬಗ್ಗೆ ಮಾತನಾಡುವ ಯು.ಟಿ.ಖಾದರ್ ಜಿಲ್ಲೆಯ ಶಾಂತಿ ಕದಡಲು ಎಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದು ಜನತೆಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಸುನೀಲ್ ಕುಮಾರ್

ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರಾಯೋಜಿತ ಹತ್ಯೆಗಳು ನಡೆದಿವೆ. ಉಡುಪಿ, ಕೊಡಗು ಮತ್ತು ಉತ್ತರ ಕನ್ನಡದಲ್ಲಿ ನಿರ್ದಿಷ್ಟ ಸಮುದಾಯ ಮತ್ತು ಸಂಘಟನೆಗಳನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿತ್ತು. ಆದರೆ, ಕಳೆದ 4 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.

ಇದನ್ನೂ ಓದಿ:ಶಾಲಾ ವಿದ್ಯಾರ್ಥಿಗಳಿಗೆ ರೈಫಲ್ ತರಬೇತಿ, ತಾಲಿಬಾನ್ ಸಂಸ್ಕೃತಿ ಬಿಂಬಿಸುತ್ತದೆ: ಯು ಟಿ ಖಾದರ್

Last Updated : May 17, 2022, 6:57 PM IST

ABOUT THE AUTHOR

...view details