ಕರ್ನಾಟಕ

karnataka

ETV Bharat / state

ಸಣ್ಣ ಹೋಟಲ್​ನಲ್ಲಿ ಉಪಹಾರ ಸೇವಿಸಿ ಸರಳತೆ ಮೆರೆದ ಸಚಿವ ಎಸ್. ಅಂಗಾರ - S. angara simplicity by eating at small canteen

ನೂತನ ಸಚಿವ ಎಸ್. ಅಂಗಾರ ಸಾಧಾರಣ ವ್ಯಕ್ತಿಯಂತೆ ಬೀದಿ ಬದಿಯ ಸಣ್ಣ ಹೋಟಲ್​​ವೊಂದರಲ್ಲಿ ತಿಂಡಿ ಸೇವಿಸಿ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸಚಿವರ ಈ ಸರಳತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಎಸ್. ಅಂಗಾರ
ಎಸ್. ಅಂಗಾರ

By

Published : Jan 18, 2021, 8:52 PM IST

ಸುಳ್ಯ:ಸಚಿವರಾಗಿ ಪ್ರಥಮ ಬಾರಿಗೆ ಸುಳ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವ ಎಸ್. ಅಂಗಾರ ಅವರು ಸುಳ್ಯ ತಾಲೂಕಿನ ಅಮ್ಚಿನಡ್ಕದ ಬೀದಿ ಬದಿಯ ಮಿನಿ ಹೋಟೆಲ್​ಗೆ ಹೋಗಿ ತಿಂಡಿ ಸೇವಿಸಿದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಚಿವ ಎಸ್. ಅಂಗಾರ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ನಂತರ ಅಲ್ಲಿಂದ ಸುಳ್ಯಕ್ಕೆ ತೆರಳುವ ಸಂದರ್ಭ ಇಲ್ಲಿನ ಗಡಿ ಭಾಗವಾದ ಅಮ್ಚಿನಡ್ಕದ ಮಿನಿ ಹೋಟೆಲೊಂದಕ್ಕೆ ಹೋಗಿ ತಿಂಡಿ ಸೇವಿಸಿದರು. ಅಲ್ಲದೇ ಸ್ಥಳೀಯರೊಂದಿಗೆ ಸಜ್ಜನಿಕೆಯಿಂದ ಬೆರೆತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಣ್ಣ ಹೋಟಲ್​​ನಲ್ಲಿ ಉಪಹಾರ ಸೇವಿಸುತ್ತಿರುವ ಸಚಿವ ಎಸ್. ಅಂಗಾರ

ಸಾಧಾರಣವಾಗಿ ಸಚಿವರುಗಳು, ಸುರಕ್ಷತೆ ಇರುವ ಹಾಗೂ ಐಷಾರಾಮಿ ಹೋಟೆಲ್‌ಗಳಲ್ಲಿ ಆಹಾರ ಸೇವಿಸುವುದು ರೂಢಿಯಾಗಿರುತ್ತದೆ. ಆದರೆ ನೂತನ ಸಚಿವ ಎಸ್. ಅಂಗಾರ ಸಾಧಾರಣ ವ್ಯಕ್ತಿಯಂತೆ ಸಣ್ಣ ಕ್ಯಾಂಟೀನ್‌ನಲ್ಲಿ ತಿಂಡಿ ಮಾಡಿದ್ದು ಸ್ಥಳೀಯರಿಗೆ ಅಚ್ಚರಿಯಾಗಿತ್ತು. ಸಚಿವರ ಈ ಸರಳತೆಯು ಸಾರ್ವಜನಿಕರ ಮೆಚ್ಚುಗೆಗೂ ಕಾರಣವಾಯಿತು.

ABOUT THE AUTHOR

...view details