ಕರ್ನಾಟಕ

karnataka

ETV Bharat / state

ನಾನೊಬ್ಬ ಕೂಲಿ ಕಾರ್ಮಿಕನ ಮಗ, ನಡೆದು ಬಂದ ದಾರಿಯನ್ನು ಯಾವತ್ತೂ ಮರೆಯಲ್ಲ.. - Minister S. Angara reaction

ನೀವುಗಳು ಬಂದ ದಾರಿಯನ್ನು ಯಾವತ್ತೂ ಮರೆಯಬೇಡಿ. ನನಗೆ ದೊರೆತ ಆಡಳಿತವನ್ನು ಪ್ರೀತಿ ಮತ್ತು ಜನರ ವಿಶ್ವಾಸದಿಂದ ಮಾಡಲು ಇಚ್ಚಿಸಿದ್ದೇನೆ..

Minister S. Angara
ಸುಬ್ರಹ್ಮಣ್ಯ ದೇವಸ್ಥಾನದ ಧರ್ಮ ಸಮ್ಮೇಳನ ಉದ್ಘಾಟಿಸಿದ ಸಚಿವ ಎಸ್.ಅಂಗಾರ

By

Published : Jan 19, 2021, 8:12 PM IST

ಸುಬ್ರಹ್ಮಣ್ಯ/ದಕ್ಷಿಣಕನ್ನಡ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರು ಷಷ್ಠಿಯ ಪ್ರಯುಕ್ತ ಧರ್ಮ ಸಮ್ಮೇಳನವು ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ನಡೆಯಿತು. ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನೂತನ ಸಚಿವ ಎಸ್.ಅಂಗಾರ

ಬಳಿಕ ಮಾತನಾಡಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ಹಣದ ಅಗತ್ಯವಿಲ್ಲ. ಇಲ್ಲಿ ನಡೆಯುವ ಎಲ್ಲಾ ಅಭಿವೃದ್ಧಿ ಕೆಲಸಗಳೂ ಭಕ್ತರ ದೇಣಿಗೆಗಳಿಂದಲೇ ಆಗುತ್ತದೆ. ನಾನೊಬ್ಬ ಕೂಲಿ ಕಾರ್ಮಿಕನ ಮಗ ಮತ್ತು ಕೂಲಿ ಕಾರ್ಮಿಕನಾಗಿ ಬಂದವನಾಗಿದ್ದು, ಬಂದ ದಾರಿಯನ್ನು ಎಂದಿಗೂ ಮರೆಯುವುದಿಲ್ಲ.

ಅದೇ ರೀತಿ ನೀವುಗಳು ಬಂದ ದಾರಿಯನ್ನು ಯಾವತ್ತೂ ಮರೆಯಬೇಡಿ. ನನಗೆ ದೊರೆತ ಆಡಳಿತವನ್ನು ಪ್ರೀತಿ ಮತ್ತು ಜನರ ವಿಶ್ವಾಸದಿಂದ ಮಾಡಲು ಇಚ್ಚಿಸಿದ್ದೇನೆ. ಎಲ್ಲರೂ ಸಹಕಾರ ನೀಡುವಂತೆ ಅವರು ವಿನಂತಿಸಿದರು. ಈ ವೇಳೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಿದರು.

ABOUT THE AUTHOR

...view details