ಮಂಗಳೂರು:ಕೆಎಸ್ಆರ್ಟಿಸಿ ಹಾಗೂ ಜಿಲ್ಲಾಡಳಿತದಿಂದ ನಿರ್ಮಿಸಲಾದ ಕೋವಿಡ್ -19 ಮೊಬೈಲ್ ಫಿವರ್ ಕ್ಲಿನಿಕ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಮೊಬೈಲ್ ಫಿವರ್ ಕ್ಲಿನಿಕ್‌ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ - Minister in charge of Dakshina Kannada District
ಕೋವಿಡ್ -19 ಮೊಬೈಲ್ ಫಿವರ್ ಕ್ಲಿನಿಕ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಕೆಎಸ್ಆರ್ಟಿಸಿ ಮಂಗಳೂರು ವಿಭಾಗ ಪ್ರಾಯೋಜಿತವಾದ ಮೊಬೈಲ್ ಫಿವರ್ ಕ್ಲಿನಿಕ್ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಆರೋಗ್ಯ ಸೇವೆ ನೀಡಲಿದೆ. ಇದರಲ್ಲಿ ವೈದ್ಯರು, ನರ್ಸ್ಗಳು ಇರುತ್ತಾರೆ. ಫಿವರ್ ಕ್ಲಿನಿಕ್‌ಗೆ ಸಾರ್ವಜನಿಕರ ಸ್ಪಂದನೆಯನ್ನು ಗಮನಿಸಿ ಇನ್ನಷ್ಟು ಕ್ಲಿನಿಕ್ಗಳ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.