ಕರ್ನಾಟಕ

karnataka

ETV Bharat / state

ಕಾರಂತರ ಬಾಲವನ ನಿರ್ಮಾಣಕ್ಕೆ ಈಗಲೇ ಕಾರ್ಯಪ್ರವೃತ್ತರಾಗಲು ಸಚಿವರ ಸೂಚನೆ

ಶಿವರಾಮ ಕಾರಂತ ಬಾಲವನವನ್ನು ನಿರಂತರ ಚಟುವಟಿಕೆಗಳ ಕೇಂದ್ರವಾಗಿಸುವ ನಿಟ್ಟಿನಲ್ಲಿ 2ನೇ ಸುತ್ತಿನ ಸಭೆ ನಡೆಸಲಾಯಿತು. ಇನ್ನೂ ಶೀಘ್ರದಲ್ಲೇ ಕಾರ್ಯ ಆರಂಭಿಸಿ ಕಾರಂತರ ಯೋಚನೆಗಳಿಗೆ ಪೂಕರವಾಗುವ ಕಾರ್ಯ ಹಮ್ಮಿಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Minister instructed to start work on Shivaram karanth's Balavana
ಕಾರಂತರ ಬಾಲವನ ನಿರ್ಮಾಣಕ್ಕೆ ಈಗಲೇ ಕಾರ್ಯಪ್ರವೃತ್ತರಾಗುವಂತೆ ಸಚಿವರ ಸೂಚನೆ

By

Published : Jun 22, 2020, 5:51 PM IST

ಪುತ್ತೂರು (ದ.ಕ) :ಪುತ್ತೂರಿನ ಶಿವರಾಮ ಕಾರಂತರ ಬಾಲವನವನ್ನು ನಿರಂತರ ಚಟುವಟಿಕೆಗಳ ಕೇಂದ್ರವಾಗಿಸುವ ಜತೆಗೆ ಅವರ ವ್ಯಕ್ತಿತ್ವಕ್ಕೆ ಅಭಾಸವಾಗಿರದೆ, ಅವರ ಯೋಚನೆಗಳಿಗೆ ಪೂರವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಈಗಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಕಾರಂತರ ಬಾಲವನ ಕುರಿತು 2ನೇ ಸುತ್ತಿನ ಸಭೆ

ಡಾ.ಶಿವರಾಮ ಕಾರಂತ ಬಾಲವನವನ್ನು ನಿರಂತರ ಚಟುವಟಿಕೆಗಳ ಕೇಂದ್ರವಾಗಿಸುವ ನಿಟ್ಟಿನಲ್ಲಿ ಏರ್ಪಡಿಸಲಾದ 2ನೇ ಸುತ್ತಿನ ಸಭೆಯಲ್ಲಿ ಅವರು ಸೂಚನೆ ನೀಡಿದರು.

ಕಾರಂತರನ್ನು ಪ್ರಥಮವಾಗಿ ಅರ್ಥ ಮಾಡಿಕೊಳ್ಳುವ ಸ್ಥಳವಿದ್ದರೆ ಅದು ಪುತ್ತೂರಿನ ಬಾಲವನ. ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿರುವ ಅವರ ಕಲೆ, ಸಾಹಿತ್ಯ, ಯಕ್ಷಗಾನ, ಬರೆದ ಪುಸ್ತಕಗಳು ಯುವ ಪೀಳಿಗೆಗೆ ತಲುಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜುಲೈ ತಿಂಗಳ ಪ್ರಥಮ ಭಾನುವಾರದಿಂದ ಕೊರೊನಾ ಹರಡದಂತೆ ಸರ್ಕಾರದ ಆದೇಶದ ಪ್ರಕಾರ ಸಾಮಾಜಿಕ ಅಂತರ ಕಾಪಾಡಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.

ಒಂದು ವಾರದಲ್ಲಿ ಎಲ್ಲಾ ಸಿದ್ಧತೆಗಳು ನಡೆಯಲಿವೆ ಎಂದು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಾಹಿತಿಗಳು, ಶಿಕ್ಷಕರು, ಕಲಾವಿದರುಗಳಿಂದ ಹಲವಾರು ಅಭಿಪ್ರಾಯಗಳನ್ನ ಕೇಳಿದರು.

ಈಗಾಗಲೇ ಮಂಗಳೂರಿನಲ್ಲಿರುವ ಕಾರಂತರ ಅಧ್ಯಯನ ಪೀಠವನ್ನು ಪುತ್ತೂರಿನ ಬಾಲವನಕ್ಕೆ ಸ್ಥಳಾಂತರ ಮಾಡುವುದು, ರಂಗಾಸಕ್ತಿಯನ್ನು ಹುಟ್ಟಿಸುವ ರಂಗಾಯಣ ರಾಜ್ಯದಲ್ಲಿ 5 ಕಡೆಗಳಲ್ಲಿ ಆಗೇಬೇಕಿದೆ. ಈಗಾಗಲೇ ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರ್ಗಿದಲ್ಲಿದ್ದು, 5ನೇ ರಂಗಾಯಣವನ್ನು ಪುತ್ತೂರಿನ ಬಾಲವನದಲ್ಲಿ ಸ್ಥಾಪಿಸುವ ಕುರಿತು ಬಾಲವನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಂದ ತೊಡಗಿ ಮಕ್ಕಳಲ್ಲಿ ಕಾರಂತರ ಬಗ್ಗೆ ತಿಳಿದುಕೊಳ್ಳಲು ವಿಡಿಯೋ ಡಾಕ್ಯುಮೆಂಟರಿ ರಚನೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಯಿತು.

ಜುಲೈ ತಿಂಗಳ ಮೊದಲ ಭಾನುವಾರ ಕಾರಂತರ ಅತೀ ಆಸಕ್ತಿಯ ಕಲೆಯಾದ ಯಕ್ಷಗಾನ ತಾಳಮದ್ದಳೆಯೊಂದಿಗೆ ಬಾಲವನದ ಒಳಾಂಗಣದಲ್ಲಿ ಕಾರ್ಯ ಆರಂಭಿಸುವ ಕುರಿತು ಸಚಿವರು ಸಮ್ಮತಿಸಿದರು. ಅಂದು ಕಾರಂತರ ಕುರಿತ ಉಪನ್ಯಾಸ ಕಾರ್ಯಕ್ರಮದೊಂದಿಗೆ ಯಕ್ಷಗಾನ ತಾಳಮದ್ದಳೆ ನಡೆಸುವುದೆಂದು ತೀರ್ಮಾನಿಸಲಾಯಿತು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ನಡೆದಾಡುವ ವಿಶ್ವಕೋಶ ಡಾ. ಶಿವರಾಮ ಕಾರಂತರನ್ನು ರಾಜ್ಯ, ರಾಷ್ಟ್ರವ್ಯಾಪಿ ಮತ್ತೊಮ್ಮೆ ಪರಿಚಯಿಸುವ ಕೇಂದ್ರವಾಗಿ ಪುತ್ತೂರು ಬಾಲವನ ನಿರ್ಮಾಣವಾಗಲಿದೆ. ಈ ಕುರಿತು ಬೆಂಗಳೂರಿನಲ್ಲಿ ಜು.25 ರಂದು ಕಾರಂತ ಟ್ರಸ್ಟ್ ವತಿಯಿಂದ ಸಭೆ ನಡೆಯಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಹಾಯಕ ಆಯುಕ್ತ, ಬಾಲವನ ಅಭಿವೃದ್ಧಿ ಸಮಿತಿಯ ಡಾ.ಯತೀಶ್ ಉಳ್ಳಾಲ್ ಹಿಂದಿನ ಸಭೆಯಲ್ಲಿ ನಡೆದ ಚರ್ಚೆಗಳನ್ನು ಓದಿದರು. ಈ ಸಂದರ್ಭದಲ್ಲಿ ಡಾ.ಶಿವರಾಮ ಕಾರಂತರ ವಾಹನ ಚಾಲಕ ಸತಾಯುಷಿ ಮೋನಪ್ಪ ಗೌಡ ಕನಕಮಜಲು ಅವರನ್ನು ಸಚಿವರು ಸನ್ಮಾನಿಸಿದರು. ಈ ವೇಳೆ ತಹಶೀಲ್ದಾರ್ ರಮೇಶ್ ಬಾಬು ಟಿ., ಹಿರಿಯ ಸಾಹಿತಿಗಳು, ಕಲಾವಿದರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details