ಮಂಗಳೂರು:ಸೂಕ್ತ ಸರಕಾರಿ ಬಂಗಲೆ ದೊರಕದ ಹಿನ್ನೆಲೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರು ಬಂದರು ಇಲಾಖೆಯ ಸುಪರ್ದಿಯಲ್ಲಿದ್ದ ಸ್ಟೇಟ್ ಬ್ಯಾಂಕ್ - ರೊಸಾರಿಯೊ ಚರ್ಚ್ ರಸ್ತೆಯಲ್ಲಿರುವ ಪಾರಂಪರಿಕ ಬ್ರಿಟಿಷ್ ಕಾಲದ ಬಂಗಲೆಯಲ್ಲಿ ತಮ್ಮ ಕಚೇರಿ ತೆರೆದಿದ್ದಾರೆ.
ಈ ಭವ್ಯ ಬಂಗಲೆ ಬ್ರಿಟಿಷರ ಕಾಲದ ಹಳೆಯ ಬಂದರು ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿತ್ತು. 1918 ರಿಂದ ಈ ಬಂಗಲೆ ಬಂದರು ಅಧಿಕಾರಿಗಳ ನಿವಾಸವಾಗಿತ್ತು. ಮೆರೈನ್ ಬಂಗಲೆ ಎಂದೇ ಪ್ರಖ್ಯಾತವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಬಂದರು ವಿಶ್ವಸ್ಥ ಮಂಡಳಿ (ಪೋರ್ಟ್ ಟ್ರಸ್ಟ್) ವ್ಯಾಪ್ತಿಗೆ ಒಳಪಟ್ಟಿತ್ತು.
ಓದಿ:ಬೆಂಗಳೂರು ಕೋವಿಡ್ ವರದಿ.. ಕೊಂಚ ತಗ್ಗಿದ ಸೋಂಕು
1980 ರ ಬಳಿಕ ಈ ಬಂಗಲೆಯನ್ನು ಬಂದರು ಅಧಿಕಾರಿಗಳು ಬಳಸುತ್ತಿದ್ದರು. ಆದರೆ, ಆ ಬಳಿಕ ನಿರ್ಹಣೆ ಕೊರತೆಯಿಂದ ಕಟ್ಟಡ ಸಂಪೂರ್ಣ ದುರಸ್ತಿ ಇಲ್ಲದೇ ಪಾಳು ಬಿದ್ದಿತ್ತು. ನಗರದ ಮಧ್ಯ ಭಾಗದಲ್ಲಿಯೇ ಇದ್ದರೂ ಈ ಪಾರಂಪರಿಕ ಕಟ್ಟಡ ಸದ್ಬಳಕೆಯಿಲ್ಲದಾಯಿತು. ಇದೀಗ 3 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರ ಕಚೇರಿಯಾಗಿ ಮಾಡಿಕೊಳ್ಳಲಾಗಿದೆ.