ಸುಳ್ಯ:ಸಚಿವ ಎಸ್ ಅಂಗಾರ ಸುಳ್ಯದಲ್ಲಿ 6 ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇದೀಗ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇಲ್ಲಿನ ಕೆಲ ಪ್ರದೇಶಗಳು ಇನ್ನೂ ಸಹ ಅಭಿವೃದ್ಧಿಯಾಗದೆ ಉಳಿದಿವೆ. ಇದರ ಸ್ವ ಅನುಭವ ಸಚಿವರಿಗೆ ಆಗಿದೆ.
ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆ.. ಜೀಪಿನಿಂದ ಕೆಳಗಿಳಿದು ಕಾಲ್ನಡಿಗೆಯಲ್ಲೇ ತೆರಳಿದ ಸಚಿವ ಅಂಗಾರ!
ಸಚಿವ ಎಸ್ ಅಂಗಾರ ತೆರಳುತ್ತಿದ್ದ ಜೀಪ್ ರಸ್ತೆ ಸರಿಯಿಲ್ಲದ ಕಾರಣ ಮುಂದೆ ಹೋಗದೆ ಅಲ್ಲೇ ನಿಂತಿದೆ. ಈ ಪರಿಣಾಮ ಜೀಪ್ನಿಂದ ಇಳಿದ ಸಚಿವರು ದಾರಿಯುದ್ದಕ್ಕೂ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ಹೌದು, ಸಚಿವರು ತೆರಳುತ್ತಿದ್ದ ಜೀಪ್ ರಸ್ತೆ ಸರಿಯಿಲ್ಲದ ಕಾರಣ ಮುಂದೆ ಹೋಗದೆ ಅಲ್ಲೇ ನಿಂತಿದೆ. ಈ ಪರಿಣಾಮ ಜೀಪ್ನಿಂದ ಇಳಿದ ಸಚಿವರು ದಾರಿಯುದ್ದಕ್ಕೂ ನಡೆದುಕೊಂಡು ಹೋಗಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ 6 ಬಾರಿ ಗೆದ್ದು, ಗೆಲುವಿನ ಸರದಾರನಾಗಿರುವ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಅಲೆಟ್ಟಿಯ ಕಚ್ಚಾ ರಸ್ತೆಯಲ್ಲಿ ತೆರಳುತ್ತಿರುವಾಗ ಈ ಘಟನೆ ನಡೆದಿದೆ.
ಸಚಿವ ಅಂಗಾರರ ತವರು ಕ್ಷೇತ್ರ ಸುಳ್ಯದಲ್ಲಿ ಈಗಾಗಲೇ ಹಲವು ಮೂಲಸೌಕರ್ಯಗಳ ಕೊರತೆಯಿದೆ. ಇತ್ತೀಚೆಗೆ ಇದೇ ಕ್ಷೇತ್ರ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಅಲ್ಲಿನ ಜನರೇ ಹಣ ಹೊಂದಿಸಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೊಂದನ್ನು ನಿರ್ಮಿಸಿದ್ದರು.