ಕರ್ನಾಟಕ

karnataka

ETV Bharat / state

ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಡಿಸಿ ಸೂಚನೆ... - ಕೊರೊನಾ ಭೀತಿಯಿಂದ ಮಿನಿ ವಿಧಾನ ಸೌಧ ಬಂದ್​

ಕೊರೊನಾ ಸಾಂಕ್ರಾಮಿಕ ರೋಗಗಳು ತಡೆಗೆ ವಿಪತ್ತು ನಿರ್ವಹಣೆ ಕಾಯ್ದೆ-2005ರ ಕಲಮಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿಗಳ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಆದೇಶದ ಹೊರಡಿಸಿದ್ದಾರೆ.

Mini vidhana is closed upto 31st March
ಬಂಟ್ವಾಳ ಮಿನಿ ವಿಧಾನಸೌಧ ಪ್ರವೇಶ ಬಂದ್

By

Published : Mar 20, 2020, 9:51 PM IST

ಬಂಟ್ವಾಳ: ಕೊರೊನಾ ಸಾಂಕ್ರಾಮಿಕ ರೋಗಗಳು ತಡೆಗೆ ವಿಪತ್ತು ನಿರ್ವಹಣೆ ಕಾಯ್ದೆ-2005ರ ಕಲಮಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿಗಳ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಆದೇಶದ ಹೊರಡಿಸಿದ್ದಾರೆ.

ಬಂಟ್ವಾಳ ಮಿನಿ ವಿಧಾನಸೌಧ ಪ್ರವೇಶ ಬಂದ್

ಈ ಹಿನ್ನೆಲೆಯಲ್ಲಿ ಬಂಟ್ವಾಳ ಮಿನಿ ವಿಧಾನಸೌಧದಲ್ಲೂ ಬಹುತೇಕ ಸಾರ್ವಜನಿಕ ಸೇವೆಗಳು ಸ್ಥಗಿತಗೊಂಡಿವೆ.

ಅಗತ್ಯ ಸೇವೆಗಳು ಹಾಗೂ ಕಂದಾಯ ಇಲಾಖೆಯ ಮೂಲಕ ನಡೆಯುತ್ತಿದ್ದ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ ಮತ್ತು ಆಧಾರ್ ಕೇಂದ್ರಗಳಲ್ಲಿನ ಸೇವೆಗಳು, ಆಧಾರ್ ಸೇವೆ ಒದಗಿಸುತ್ತಿರುವ ಇತರ ಕೇಂದ್ರಗಳಲ್ಲಿನ ಸೇವೆಗಳನ್ನೂ ಮಾರ್ಚ್​ 31ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೊರಡಿಸಲಾಗಿದೆ.

ಮಾಹಿತಿ ತಿಳಿಯದ ಕೆಲ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಮಿನಿವಿಧಾನ ಸೌಧ ಹಾಗೂ ತಾಲೂಕಿನ ಹಲವು ಸರ್ಕಾರಿ ಕಚೇರಿಗಳಿಗೆ ಆಗಮಿಸಿ, ಸೇವೆ ಲಭ್ಯವಿಲ್ಲದ ಕಾರಣ ವಾಪಸ್​ ಆಗುತ್ತಿದ್ದ ದೃಶ್ಯಗಳು ಕಂಡುಬಂತು.

ABOUT THE AUTHOR

...view details