ಕರ್ನಾಟಕ

karnataka

ಉಳ್ಳಾಲ ಕೊಲ್ಯದಲ್ಲಿ ಮಿನಿ ಸ್ಟೇಡಿಯಂ ನಿರ್ಮಾಣ: ಶಾಸಕ ಯು.ಟಿ. ಖಾದರ್

By

Published : Nov 14, 2020, 11:36 PM IST

ಸೋಮೇಶ್ವರ ಪುರಸಭೆ ನಿಧಿ, 14ನೇ ಹಣಕಾಸು ಯೋಜನೆ ಹಾಗೂ ಎಂಆರ್​ಪಿಎಲ್ ಸಹಯೋಗದೊಂದಿಗೆ ರೂ. 12,80,000 ಅನುದಾನದಡಿ 1ನೇ ಕೊಲ್ಯ ಸೋಮೇಶ್ವರದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಯು.ಟಿ. ಖಾದರ್ ಉದ್ಘಾಟಿಸಿದರು.

MLA UT Khader
ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಉಳ್ಳಾಲ: ಕೊಲ್ಯ ಶ್ರೀ ರಾಮ ಫ್ರೆಂಡ್ಸ್ ಸರ್ಕಲ್ ಕ್ರೀಡಾಂಗಣವನ್ನು ಮಿನಿ ಸ್ಟೇಡಿಯಂ ಆಗಿ ಪರಿವರ್ತನೆಗೊಳಿಸಲಾಗುವುದು. ಈ ಮೂಲಕ ಯುವ ಸಮುದಾಯಕ್ಕೆ ಕ್ರೀಡೆಯಲ್ಲಿ ಪ್ರೋತ್ಸಾಹಿಸಲು ಸುಸಜ್ಜಿತ ಕ್ರೀಡಾಂಗಣ, ಮಕ್ಕಳಿಗಾಗಿ ಪಾರ್ಕ್, ವಿಹರಿಸಲು ಗಾರ್ಡನ್ ಹಾಗೂ ವಾಕಿಂಗ್ ಟ್ರ್ಯಾಕ್​ನ್ನು ರಚಿಸಲಾಗುವುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು.

ಅವರು ಸೋಮೇಶ್ವರ ಪುರಸಭೆ ನಿಧಿ, 14ನೇ ಹಣಕಾಸು ಯೋಜನೆ ಹಾಗೂ ಎಂಆರ್​ಪಿಎಲ್ ಸಹಯೋಗದೊಂದಿಗೆ ರೂ. 12,80,000 ಅನುದಾನದಡಿ 1ನೇ ಕೊಲ್ಯ ಸೋಮೇಶ್ವರದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ, ಮಕ್ಕಳ ದಿನಾಚರಣೆಯನ್ನು ಆಚರಿಸಿ, ಬೀದಿಬದಿ ವ್ಯಾಪಾರಿಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು. ಅಂಗನವಾಡಿಯಲ್ಲಿ ಉತ್ತಮ ನೀತಿಯನ್ನು ಕಲಿತು ಮಕ್ಕಳಿಗೆ ಭವಿಷ್ಯದಲ್ಲಿ ದೊಡ್ಡ ಸ್ಥಾನ ಲಭಿಸಿ ಹೆತ್ತವರ ಆಸ್ತಿ ಜತೆಗೆ ದೇಶದ ಆಸ್ತಿ ಸಂಪತ್ತಾಗಬೇಕಿದೆ. ನೂತನವಾಗಿ ಮೇಲ್ದರ್ಜೆಗೆ ಏರಿದ ಸೋಮೇಶ್ವರ ಪುರಸಭೆಗೆ ಸಮರ್ಥ ಅಧಿಕಾರಿ ಬೇಕಿರುವುದರಿಂದ ಉಳ್ಳಾಲ ನಗರಸಭೆಯನ್ನು ಸಮರ್ಥವಾಗಿ ನಿಭಾಯಿಸಿದ ಮುಖ್ಯಾಧಿಕಾರಿಯನ್ನು ನೇಮಿಸಲಾಗಿದೆ ಎಂದರು.

ದೇಶ ಸದೃಢವಾಗಲು ನೆಹರು ಯೋಜನೆಗಳು ಪೂರಕ. ನೆಹರೂರವರು ನಡೆಸಿದ ಹಸಿರು ಕ್ರಾಂತಿ ಯೋಜನೆಯಿಂದ ದೇಶದಿಂದ ವಿದೇಶಕ್ಕೆ ಆಹಾರ ರಫ್ತು ನಡೆಸಲು ಸಾಧ್ಯವಾಗಿದೆ. ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ವ್ಯಾಪ್ತಿಗೆ ಸಂಬಂಧಿಸಿದ ಹಲವು ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಸದ್ಯ ಅಂಗನವಾಡಿಯ ಸಮೀಪವೇ ಇರುವ ಶ್ರೀ ರಾಮ ಫ್ರೆಂಡ್ಸ್ ಸರ್ಕಲ್ ಕ್ರೀಡಾಂಗಣವನ್ನು ಮಿನಿ ಸ್ಟೇಡಿಯಂ ಆಗಿ ಪರಿವರ್ತನೆಗೊಳಿಸುವ ಯೋಜನೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ಬಂಗೇರ ಹಾಗೂ ಗುತ್ತಿಗೆದಾರ ಕೇಶವ ಬಾಬು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಕೋಟೆಕಾರು ಪ.ಪಂ ಅಧ್ಯಕ್ಷೆ ಜಯಶ್ರೀ ಪ್ರಫುಲ್ಲಾ ದಾಸ್, ಎಂಆರ್​ಪಿಎಲ್ ಮಂಗಳೂರು ಇದರ ಪ್ರಬಂಧಕ ಸಿ.ನಾಗೇಶ್, ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿಗಳಾದ ಹರೀಶ್ ಕೆ, ಶೈಲಜಾ ಕೆ. ಖಾರ್ವಿ, ಮಾಜಿ ಕೌನ್ಸಿಲರ್ ಗೋಪಾಲಕೃಷ್ಣ , ಅಂಗನವಾಡಿಯ ಅಧಿಕಾರಿ ಶಂಕರಿ ಉಪಸ್ಥಿತರಿದ್ದರು.

ABOUT THE AUTHOR

...view details