ಕರ್ನಾಟಕ

karnataka

ETV Bharat / state

ಶಾಸಕ ಖಾದರ್ ಎಚ್ಚರಿಕೆ: ಕೇರಳ ಗಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಊರಿಗೆ ಕಳುಹಿಸಿದ ದ.ಕ ಜಿಲ್ಲಾಡಳಿತ - migration Migrant workers Sent home From Mangaluru

ಲಾಕ್ ಡೌನ್ ಹಿನ್ನೆಲೆ ಊರಿಗೆ ತೆರಳಲಾಗದೆ ಕೇರಳ-ಕರ್ನಾಟಕ ಗಡಿಭಾಗದ ಶಾಲೆಯೊಂದರಲ್ಲಿ ಆಶ್ರಯ ಪಡೆದಿದ್ದ ಕೂಲಿ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡುವಂತೆ ಶಾಸಕ ಯು.ಟಿ ಖಾದರ್​ ಆಗ್ರಹಿಸಿದ್ದರು. ಈ ಹಿನ್ನೆಲೆ ತಡ ರಾತ್ರಿ ಐದು ಕೆಸ್​ಆರ್​ಟಿಸಿ ಬಸ್​ಗಳಲ್ಲಿ ಎಲ್ಲಾ ಕಾರ್ಮಿಕರನ್ನು ದ.ಕ ಜಿಲ್ಲಾಡಳಿತ ಊರಿಗೆ ಕಳುಹಿಸಿಕೊಟ್ಟಿದೆ.

DK District administration sent workers stranded on the Kerala border
ಕಾರ್ಮಿಕರನ್ನು ಊರಿಗೆ ಕಳುಹಿಸಿದ ದ.ಕ ಜಿಲ್ಲಾಡಳಿತ

By

Published : May 7, 2020, 10:12 AM IST

ಉಳ್ಳಾಲ : ಕೇರಳ- ಕರ್ನಾಟಕ ಗಡಿಭಾಗದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಮಂಗಳವಾರ ತಡರಾತ್ರಿ ಐದು ಕೆಎಸ್​ಆರ್​​ಟಿಸಿ ಬಸ್​​ಗಳಲ್ಲಿ ಊರಿಗೆ ಕಳುಹಿಸಿಕೊಡಲಾಗಿದೆ.

ಕೇರಳಕ್ಕೆ ಕೂಲಿ ಅರಸಿ ಹೋಗಿದ್ದ ನೂರಾರು ವಲಸೆ ಕಾರ್ಮಿಕರು ಊರಿಗೆ ತೆರಳಲಾಗದೆ ಕೇರಳ-ಕರ್ನಾಟಕ ಗಡಿ ಭಾಗ ಕುಂಜತ್ತೂರಿನ ಮರಿಯಾಶ್ರಮ ಶಾಲೆಯಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರಿಂದ ಈ ಬಗ್ಗೆ ಮಾಹಿತಿ ಪಡೆದ ಶಾಸಕ ಯು.ಟಿ ಖಾದರ್ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕರ ಜೊತೆ ಮಾತುಕತೆ ನಡೆಸಿದ್ದರು. ಅಲ್ಲದೆ, ಜಿಲ್ಲಾಡಳಿತ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡದೇ ಇದ್ದಲ್ಲಿ ತಾವೆ ಲಾಕ್ ಡೌನ್ ಮುರಿದು ಕಳುಹಿಸಿಕೊಡುವುದಾಗಿ ಎಚ್ಚರಿಸಿದ್ದರು. ಹೀಗಾಗಿ, ಎಚ್ಚೆತ್ತ ಜಿಲ್ಲಾಡಳಿತ ತಡ ರಾತ್ರಿ ವಿಜಯಪುರ, ದಾವಣಗೆರೆ, ಹುಬ್ಬಳ್ಳಿ, ಗದಗ, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ 127 ಕಾರ್ಮಿಕರನ್ನು ಐದು ಬಸ್ಸುಗಳಲ್ಲಿ ತಲಪಾಡಿಯಿಂದ ಕಳುಹಿಸಿಕೊಟ್ಟಿದೆ.

ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ ಶಾಸಕ ಖಾದರ್​

ಈ ವೇಳೆ ತಹಶೀಲ್ದಾರ್ ಗುರುಪ್ರಸಾದ್, ಸಹಾಯಕ ಆಯುಕ್ತ ಮದನ್ ಮೋಹನ್, ಕಂದಾಯ ನಿರೀಕ್ಷಕ ಸ್ಟೀಫನ್, ತಾ.ಪಂ ಸದಸ್ಯ ಸಿದ್ದೀಖ್ ತಲಪಾಡಿ, ತಲಪಾಡಿ ಗ್ರಾ. ಪಂ.ಸದಸ್ಯರಾದ ವಿನಯ್ ಶೆಟ್ಟಿ, ವೈಭವ್ ಶೆಟ್ಟಿ, ಹಾಗೂ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details