ಮಂಗಳೂರು : ಕಾರು ಅಟೋ ಲಾಕ್ ಆದ ಪರಿಣಾಮ ಮಗುವೊಂದು ಸುಮಾರು 20 ನಿಮಿಷಗಳ ಕಾಲ ಕಾರಿನಲ್ಲಿ ಬಂಧಿಯಾಗಿದ್ದ ಘಟನೆ ನಗರದಲ್ಲಿ ನಡೆದಿದ್ದು, ಕಾರಿನ ಗ್ಲಾಸ್ ಒಡೆದು ಮಗುವನ್ನ ರಕ್ಷಿಸಲಾಗಿದೆ.
ಕಾರಿನಲ್ಲೇ ಮಗು ಮರೆತ ಹೋದ ಪೋಷಕರು... ಕಾರ್ ಗ್ಲಾಸ್ ಒಡೆದು ಮಗುವಿನ ರಕ್ಷಣೆ!
ಕಾರಿನಲ್ಲೇ ಮಗುವನ್ನ ಬಿಟ್ಟು ಕೀ ಮರೆತು ಹೋದ ಪೋಷಕರು, ಕೀ ಕಾರಿನೊಳಗೆ ಉಳಿದಿದೆ ಎಂದು ತಿಳಿಯುವ ವೇಳೆಗೆ ಕಾರು ಅಟೋ ಲಾಕ್ ಆಗಿ ಮಗು ಕಾರಿನಲ್ಲಿ ಬಂಧಿಯಾಗಿದ್ದ ಘಟನೆ ನಗರದಲ್ಲಿ ನಡೆದಿದೆ.
ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಬಳಿಯ ಸಂಜೀವ ಶೆಟ್ಟಿ ಜವಳಿ ಅಂಗಡಿಗೆ ಬಟ್ಟೆ ಖರೀದಿಗೆ ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಪೋಷಕರು ಮಗುವನ್ನು ಕಾರಿನಲ್ಲೇ ಬಿಟ್ಟು, ಕೀ ಕೂಡ ಅದರಲ್ಲೆ ಬಿಟ್ಟು ಜವುಳಿ ಅಂಗಡಿಗೆ ಹೋಗಿದ್ದರು. ಕಾರು ಆಟೋ ಲಾಕ್ ಆಗಿತ್ತು. ಇದೇ ಸಂದರ್ಭದಲ್ಲಿ ಮಗು ಕೂಡಾ ಕಾರಿನ ಕೀಯನ್ನು ಹಿಡಿದುಕೊಂಡು ಆಟ ಆಡುತ್ತಿತ್ತು. ವಿಷಯ ತಿಳಿದು ಜನರ ಗುಂಪು ಕಾರಿನ ಸುತ್ತು ಆವರಿಸಿದಾಗ ಮಗು ಅಳತೊಡಗಿತ್ತು. ಗಾಬರಿಗೊಂಡ ಪೋಷಕರು ಕಾರಿನ ಲಾಕ್ ತೆಗೆಯಲು ಪೇಚಾಡುತ್ತಿದ್ದರು. ಇದನ್ನು ಗಮನಿಸಿದ ಕೂರ್ನಡ್ಕ ಯೆಂಗ್ ಮೆನ್ಸ್ ನ ಅಧ್ಯಕ್ಷ ಸಿರಾಜ್ ಎ ಕೆ ಮತ್ತು ಜಾಸ್ಲಿ ಡಿಸೋಜ ಎಂಬವರು ಕಾರಿನ ಹಿಂಬದಿ ಎಡ ಬದಿಯಲ್ಲಿರುವ ಕನ್ನಡಿ ಒಡೆದು ಮಗುವನ್ನು ರಕ್ಷಿಸಿದ್ದಾರೆ.