ಕರ್ನಾಟಕ

karnataka

ETV Bharat / state

ಮಂಗಳೂರು ಏರ್​ಪೋರ್ಟ್ ಸಿಐಎಸ್​ಎಫ್ ಕಚೇರಿಗೆ ಬಂತು 'ಟೆರರಿಸ್ಟ್' ಇ-ಮೇಲ್!​

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಐಎಸ್​ಎಫ್ ಕಚೇರಿಯ ಇ-ಮೇಲ್​ಗೆ 'ಟೆರರಿಸ್ಟ್' ಪದ ಬಳಸಿ ಅನಾಮಧೇಯ ಸಂದೇಶವೊಂದು ಬಂದಿದೆ. ಈ ಬಗ್ಗೆ ದೂರು ದಾಖಲಿಸಲಾಗಿದೆ.

message
message

By

Published : May 30, 2021, 10:32 PM IST

Updated : May 30, 2021, 10:47 PM IST

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್​ಎಫ್ ಕಚೇರಿಯ ಇ-ಮೇಲ್​ಗೆ 'ಟೆರರಿಸ್ಟ್' ಪದ ಬಳಸಿ ಅನಾಮಧೇಯ ಸಂದೇಶವೊಂದು ರವಾನೆಯಾಗಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಐಎಸ್​ಎಫ್ ಕಚೇರಿಯ ಇ-ಮೇಲ್ ಗೆ ಏಪ್ರಿಲ್​ 23ರಂದು ಅನಾಮಧೇಯ ವ್ಯಕ್ತಿಯೋರ್ವ 'ವಾಟ್ಸ್​ಪ್? ಆ್ಯಮ್ ಟೆರರಿಸ್ಟ್' ಎಂಬ ಸಂದೇಶ ರವಾನಿಸಿದ್ದಾನೆ ಎಂದು ಮೇ 29ರಂದು ಬಜ್ಪೆ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರಕರಣವನ್ನು ಹೆಚ್ಚಿನ ತನಿಖೆ ನಡೆಸುವ ಸಲುವಾಗಿ ನಗರ ಸೈಬರ್ ಠಾಣೆಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Last Updated : May 30, 2021, 10:47 PM IST

ABOUT THE AUTHOR

...view details