ಕರ್ನಾಟಕ

karnataka

ETV Bharat / state

ಮಂಗಳೂರು: ಮೆಸ್ಕಾಂ ವಿದ್ಯುತ್ ದರ ಪರಿಷ್ಕರಣೆಗೆ ಗ್ರಾಹಕರ ಆಕ್ಷೇಪ - Mescom

ಮಂಗಳೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಸಭಾಂಗಣದಲ್ಲಿ ನಡೆದ ಮೆಸ್ಕಾಂ ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾವನೆಯನ್ನು ಶಂಭು ದಯಾಳ್ ಮೀನಾ ನೇತೃತ್ವದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದ್ದು, ಈ ಸಂದರ್ಭ ವಿದ್ಯುತ್ ಸುಂಕ‌ ಹೆಚ್ಚಳ ಪ್ರಸ್ತಾವಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Mescom power rate revision
ಮೆಸ್ಕಾಂ ವಿದ್ಯುತ್ ದರ ಪರಿಷ್ಕರಣೆಗೆ ಗ್ರಾಹಕರ ಆಕ್ಷೇಪ

By

Published : Feb 19, 2021, 7:15 PM IST

ಮಂಗಳೂರು: ಕೊರೊನಾ ಸಂಕಷ್ಟದ ವರ್ಷದಲ್ಲಿ 943.26 ಕೋಟಿ ರೂ. ಆದಾಯ ಕೊರತೆ ಸರಿದೂಗಿಸಲು ಮೆಸ್ಕಾಂ ಯೂನಿಟ್​​ಗೆ 1.67 ರೂ.‌ ವಿದ್ಯುತ್ ಸುಂಕ ಹೆಚ್ಚಳ ಮಾಡಲು ಸಲ್ಲಿಸಿರುವ ಪ್ರಸ್ತಾವಕ್ಕೆ ರೈತರು, ಗ್ರಾಹಕರು, ಕೈಗಾರಿಕೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮೆಸ್ಕಾಂ ವಿದ್ಯುತ್ ದರ ಪರಿಷ್ಕರಣೆಗೆ ಗ್ರಾಹಕರ ಆಕ್ಷೇಪ

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮೆಸ್ಕಾಂಗೆ ಗ್ರಾಹಕರಿಂದ 5119.61 ಕೋಟಿ ರೂ. ಆದಾಯದ ಅವಶ್ಯಕತೆ ಇದೆ. ಆದರೆ ಪ್ರಸ್ತುತ 4176.35 ಕೋಟಿ ರೂ. ಆದಾಯ ಮಾತ್ರ ಸಂಗ್ರಹ ಆಗುತ್ತಿದೆ. ಪರಿಣಾಮ ಮೆಸ್ಕಾಂಗೆ 943.26 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಹೇಳಿದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕೆಸಿಸಿಐ ಪ್ರತಿನಿಧಿಗಳು, ಕೊರೊನಾ ಸಂಕಷ್ಟದಿಂದ ಕೈಗಾರಿಕೆಗಳ ವ್ಯವಹಾರದಲ್ಲಿ ತೀವ್ರ ಏರುಪೇರಾಗಿದೆ. ಇಂತಹ ಸಮಯದಲ್ಲಿ ಸುಂಕ ಹೆಚ್ಚಳವಾಗಲೇಬಾರದು ಎಂದು ಆಗ್ರಹಿಸಿದರು. ಅಲ್ಲದೆ ಕರಾವಳಿ ಐಸ್ ಪ್ಲ್ಯಾಂಟ್ ಮಾಲೀಕರ ಸಂಘದ ಅಧ್ಯಕ್ಷ ದೇವಿದಾಸ್ ಶೆಟ್ಟಿಗಾರ್ ಮಾತನಾಡಿ, ವಿದ್ಯುತ್ ಸುಂಕ ಹೆಚ್ಚಳದಿಂದ ಐಸ್ ಪ್ಲ್ಯಾಂಟ್​ಗಳಿಗೆ ಮಾಸಿಕ‌ 50 ಸಾವಿರ ರೂ. ನಷ್ಟವಾಗಲಿದೆ ಎಂದರು.

ABOUT THE AUTHOR

...view details