ಕರ್ನಾಟಕ

karnataka

ETV Bharat / state

ಬ್ಯಾಂಕ್​ಗಳ ವಿಲೀನ ಹಿಂದೆ ಸಾಮ್ರಾಜ್ಯಶಾಹಿ ಗಳ ಪಿತೂರಿ ಅಡಗಿದೆ: ಹೆಚ್ ವಿ ರಾವ್ ಆಕ್ರೋಶ - State Bank

ಕರಾವಳಿ ಜಿಲ್ಲೆಗಳ ಪ್ರಮುಖ ಬ್ಯಾಂಕ್​ಗಳ ವಿಲೀನದ ಹಿಂದೆ ಸಾಮ್ರಾಜ್ಯ ಶಾಹಿಗಳ ಪಿತೂರಿ ಅಡಗಿದೆ. ಎಲ್ಲವೂ ವಿಶ್ವ ಬ್ಯಾಂಕ್ ಅಣತಿಯಂತೆ ನಡೆಯುತ್ತಿದೆ ಎಂದು ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್.ವಿ ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಹೆಚ್ ವಿ ರಾವ್ ಆಕ್ರೋಶ

By

Published : Aug 30, 2019, 8:09 PM IST

ಮಂಗಳೂರು:ಕರಾವಳಿ ಜಿಲ್ಲೆಗಳ ಮೂರು ಬ್ಯಾಂಕ್ ಗಳಾದ ಸಿಂಡಿಕೇಟ್ , ಕೆನರಾ ಮತ್ತು ಕಾರ್ಪೋರೇಷನ್ ಬ್ಯಾಂಕ್ ಗಳು ವಿಲೀನಗೊಳಿಸುತ್ತಿರುವ ಬಗ್ಗೆ ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್.ವಿ ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿ, ಬ್ಯಾಂಕ್​ ವಿಲೀನ ಪ್ರಕ್ರಿಯೆ ಸುದ್ದಿ ನೋವು ತಂದಿದೆ. ವಿಲೀನ ಹೊಸತೇನಲ್ಲ. ಹಿಂದಿನಿಂದಲೂ ಇಂತಹ ಪ್ರಕ್ರಿಯೆ ನಡೆಯುತ್ತಿದೆ. ಆದರೆ ದೇಶ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಜೊತೆಗೆ ಕೆಲವು ಬ್ಯಾಂಕ್ ಗಳು ವಿಲೀನವಾದಾಗ ಆದ ಅನಾಹುತಗಳು ನೋಡಿದ್ದೇವೆ. ಇದನ್ನೆಲ್ಲ ಬದಿಗಿಟ್ಟು ಹೊಸ ಧೋರಣೆಯನ್ನು ಸರಕಾರ ಅನುಸರಿಸುತ್ತಿದೆ. ಇದರಿಂದ ಯಾವುದೇ ಬ್ಯಾಂಕ್ ಗಳಿಗೆ‌ ಲಾಭವಿಲ್ಲ. ಎನ್.ಪಿ.ಎ ಕೂಡ ಕಡಿಮೆ ಆಗುವುದಿಲ್ಲ ಎಂದರು.

ಹೆಚ್ ವಿ ರಾವ್ ಆಕ್ರೋಶ

ಬ್ಯಾಂಕ್ ನ ಎಲ್ಲಾ ಯೂನಿಯನ್ ಗಳು ಇದನ್ನು ಬಹಳ ಹಿಂದಿನಿಂದಲೇ ವಿರೋಧಿಸುತ್ತಿವೆ. ಆದರೆ ಸಕಾರಣ ನೀಡದೆ ಬ್ಯಾಂಕ್ ವಿಲೀನ ಮಾಡುತ್ತಿದ್ದಾರೆ. ಇದು ವಿಶ್ವ ಬ್ಯಾಂಕ್ ಅಣತಿಯಂತೆ ನಡೆಯುತ್ತಿದೆ. ಇದರ ಹಿಂದೆ ಸಾಮ್ರಾಜ್ಯ ಶಾಹಿಗಳ ಪಿತೂರಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details