ಮಂಗಳೂರು:ಆ್ಯಂಟನಿ ವೇಸ್ಟ್ ಕಂಪೆನಿಯ ತ್ಯಾಜ್ಯ ನಿರ್ವಹಣೆ ಗುತ್ತಿಗೆ ವಹಿಸಿಕೊಂಡಿದ್ದ ನವೀನ್ ಚಂದ್ರ, ತೀವ್ರ ಜ್ವರಕ್ಕೆ ತುತ್ತಾಗಿ, ವಾರದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗಿದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ನಾಲ್ವರನ್ನ ಬಲಿ ಪಡೆದ ಡೆಂಘ್ಯೂ ಮಹಾಮಾರಿ : ಕರಾವಳಿಯಲ್ಲಿ ಭೀತಿ - ಮಂಜುನಾಥ್
ತೀವ್ರ ಜ್ವರದಿಂದ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದು, ಈ ವ್ಯಕ್ತಿಗೆ ಡೆಂಘ್ಯೂ ಜ್ವರ ಬಂದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಆ್ಯಂಟನಿ ವೇಸ್ಟ್ ಕಂಪನಿಯ ಮೇಲ್ವಿಚಾರಕ ನವೀನ್ ಚಂದ್ರ ಕದ್ರಿ (56) ಮೃತಪಟ್ಟವರು.
ನವೀನ್ ಚಂದ್ರ ಕದ್ರಿ
ಕರಾವಳಿಯಾದ್ಯಂತ ಡೆಂಘ್ಯೂ ಜ್ವರ ತೀವ್ರವಾಗಿ ಬಾಧಿಸುತ್ತಿದ್ದು, ಈಗಾಗಲೇ ಎರಡು ಮಕ್ಕಳು ಹಾಗೂ ಓರ್ವ ಮಹಿಳೆ ಜ್ವರಕ್ಕೆ ಬಲಿಯಾಗಿದ್ದಾರೆ. ಈಗ ನವೀನ್ ಚಂದ್ರ ಶಂಕಿತ ಡೆಂಘ್ಯೂಗೆ ಬಲಿಯಾದ ನಾಲ್ಕನೇ ವ್ಯಕ್ತಿಯಾಗಿದ್ದಾರೆ.