ಮಂಗಳೂರು: ಮಾಜಿ ತಾಪಂ ಸದಸ್ಯರೋರ್ವರ ಮನೆಯಲ್ಲಿ ನಗ-ನಾಣ್ದಯ ಕಳ್ಳತನ ಮಾಡಿರುವ ಘಟನೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ. ಮಾಜಿ ತಾಪಂ ಸದಸ್ಯ, ಬಿಜೆಪಿ ಸಕ್ರಿಯ ಕಾರ್ಯಕರ್ತ ಸೋಮಪ್ಪ ಕೋಟ್ಯಾನ್ ಮನೆಯಲ್ಲಿ ಈ ಕಳವು ನಡೆದಿದೆ. ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ಹೊರಗಡೆ ಹೋಗಿದ್ದ ಸಂದರ್ಭ ನೋಡಿ ಆರೋಪಿಗಳು ಹಾಡಹಗಲೇ ಹಿಂಬದಿಯ ಬಾಗಿಲು ಮುರಿದು ಮನೆಯೊಳಗೆ ಪ್ರವೇಶ ಮಾಡಿದ್ದು, ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.
ಹಾಡಹಗಲೇ ಮಾಜಿ ತಾಪಂ ಸದಸ್ಯನ ಮನೆಯಲ್ಲಿ ನಗ-ನಾಣ್ಯ ಕಳ್ಳತನ - ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಘಟನೆ
ಮಾಜಿ ತಾಪಂ ಸದಸ್ಯರೋರ್ವರ ಮನೆಯಲ್ಲಿ ನಗ-ನಾಣ್ಯ ಕಳ್ಳತನ ಮಾಡಿರುವ ಘಟನೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ.
ಸೋಮಪ್ಪ ಕೋಟ್ಯಾನ್
ಮನೆಯ ಕೋಣೆಯಲ್ಲಿದ್ದ ಬೀರು ಮುರಿದ ಕಳ್ಳರು 398 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಹಾಗೂ 15000 ರೂ. ನಗದು ಕಳವು ಮಾಡಿದ್ದಾರೆ. ಕಳವು ಆದ ಸೊತ್ತಿನ ಒಟ್ಟು ಮೌಲ್ಯ 12,92,600 ಲಕ್ಷ ರೂ. ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿದ ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.