ಕರ್ನಾಟಕ

karnataka

ETV Bharat / state

ಕುವೈತ್​​​ನಿಂದ ಹಡಗಿನ ಮೂಲಕ ಮಂಗಳೂರು ತಲುಪಿದ ಆಕ್ಸಿಜನ್-ವೈದ್ಯಕೀಯ ಸಲಕರಣೆಗಳು - ಕುವೈಟ್​ನಿಂದ ವೈದ್ಯಕೀಯ ನೆರವು

ಕುವೈತ್​ನಿಂದ ವೈದ್ಯಕೀಯ ಸಲಕರಣೆಗಳನ್ನು ಹೊತ್ತು ತಂದ ನೌಕಾಪಡೆಯ ಹಡಗು ನವ ಮಂಗಳೂರು ಬಂದರು ತಲುಪಿದೆ.

Medical assistance from Kuwait reached to Mangalur
ವೈದ್ಯಕೀಯ ಸಲಕರಣೆಗಳನ್ನು ಸ್ವೀಕರಿಸಿದ ಅಧಿಕಾರಿಗಳು

By

Published : May 25, 2021, 10:40 AM IST

ಮಂಗಳೂರು: ಆಕ್ಸಿಜನ್ ಕೊರತೆಯಿಂದ ಸಂಕಷ್ಟದಲ್ಲಿರುವ ಭಾರತಕ್ಕೆ ಕುವೈತ್​ನ ಭಾರತೀಯ ಸಮುದಾಯವನ್ನು ಬೆಂಬಲಿಸುವ ಗುಂಪು ನೆರವಿನ ಹಸ್ತ ಚಾಚಿದೆ.

ಕುವೈತ್​ನಿಂದ ಇಂದು ಮಂಗಳೂರಿಗೆ ಆಕ್ಸಿಜನ್ ಮತ್ತು ವೈದ್ಯಕೀಯ ಉಪಕರಣಗಳ ಆಗಮನವಾಗಿದೆ. ಕುವೈತ್​ನ ಭಾರತೀಯ ಸಮುದಾಯ ಬೆಂಬಲಿಸುವ ಗುಂಪು ಇದನ್ನು ಕೊಡುಗೆಯಾಗಿ ನೀಡಿದೆ. ಭಾರತೀಯ ನೌಕಾಪಡೆಯ ಐಎನ್ಎಸ್ ಶಾರ್ದೂಲ್ ಹಡಗಿನಲ್ಲಿ ಇಂದು ಬೆಳಗ್ಗೆ ವೈದ್ಯಕೀಯ ಸಲಕರಣೆಗಳು ಮಂಗಳೂರು ತಲುಪಿವೆ.

ವೈದ್ಯಕೀಯ ಸಲಕರಣೆಗಳನ್ನು ಸ್ವೀಕರಿಸಿದ ಅಧಿಕಾರಿಗಳು

ಇದರಲ್ಲಿ 11 ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್, 2 ಸೆಮಿ ಟ್ರೈಲರ್, 1,200 ಆಕ್ಸಿಜನ್ ಸಿಲಿಂಡರ್ ಒಳಗೊಂಡಿದೆ. ನವಮಂಗಳೂರು ಬಂದರಿಗೆ ವೈದ್ಯಕೀಯ ನೆರವು​​ ಹೊತ್ತ ಹಡಗು ಆಗಮಿಸುತ್ತಿದ್ದಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಾಂತರಾಮ್ ಶೇಟ್, ಕಾರ್ಯದರ್ಶಿ ಪ್ರಭಾಕರ್ ಶರ್ಮ, ರಾಜ್ಯ ಆಡಳಿತ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ ಸ್ವೀಕರಿಸಿದರು.

ಓದಿ : ಕೊರೊನಾ ನಿಯಂತ್ರಣ, ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ಕಾರ್ಯ ಮಹತ್ವದ್ದು: ವಿ.ಪೊನ್ನುರಾಜ್

ಈ ಸಂದರ್ಭದಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ, ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಸಿಪಿ ಮಹೇಶ್ ಕುಮಾರ್ ಮತ್ತು ಕೋಸ್ಟ್ ಗಾರ್ಡ್ ಕಮಾಂಡರ್ ವೆಂಕಟೇಶ್ ಉಪಸ್ಥಿತರಿದ್ದರು.

ABOUT THE AUTHOR

...view details