ಮಂಗಳೂರು: ಕುಡಿಯುವ ನೀರಿನ ದರ ಹೆಚ್ಚಳದ ಬಗ್ಗೆ ಯಾರೂ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ಈ ಬಗ್ಗೆ ಶಾಸಕರು, ಸಂಸದರು ಹಾಗೂ ಹಿರಿಯ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮನಪಾ ನೂತನ ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.
ಜನರೊಂದಿಗೆ ನಾನು ಸದಾ ಇರುತ್ತೇನೆ: ಮನಪಾ ನೂತನ ಮೇಯರ್ - ಮನಪಾ ಮೇಯರ್ ದಿವಾಕರ ಪಾಂಡೇಶ್ವರ
ಸಣ್ಣಪುಟ್ಟ ವಿಷಯಗಳಿಗೆ ಚರ್ಚೆ ಮಾಡಿ ಆ ಸಮಯವನ್ನು ವ್ಯರ್ಥ ಮಾಡದೆ ಅಭಿವೃದ್ಧಿ ಕಡೆಗೆ ಮೀಸಲಾಗಿರಿಸಿ ಜನರೊಂದಿಗೆ ನಾನು ಸದಾ ಇರುತ್ತೇನೆ. ಜನರ ಯಾವುದೇ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತೇನೆ. ಅಲ್ಲದೆ ಪ್ರತಿ ದಿನ ಐದು ವಾರ್ಡ್ಗಳಿಗೆ ಭೇಟಿ ನೀಡುತ್ತೇನೆ. ಯಾವುದೇ ದೂರುಗಳಿಗೆ ಸ್ಪಂದಿಸುತ್ತೇನೆ. ಯಾವುದೇ ರಾಜಕೀಯ ಮಾಡದೆ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತೇನೆ ಎಂದು ಮನಪಾ ನೂತನ ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.
![ಜನರೊಂದಿಗೆ ನಾನು ಸದಾ ಇರುತ್ತೇನೆ: ಮನಪಾ ನೂತನ ಮೇಯರ್ MCC mayor Deputy Mayor Joint Press Meet](https://etvbharatimages.akamaized.net/etvbharat/prod-images/768-512-6236330-thumbnail-3x2-hrs.jpg)
ಮಹಾನಗರ ಪಾಲಿಕೆಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ಟ್ರೇಡ್ ಲೈಸೆನ್ಸ್ನಲ್ಲಿ ತ್ಯಾಜ್ಯ ವಿಲೇವಾರಿ ಶುಲ್ಕ ಅಧಿಕವಾಗಿದೆ ಎಂಬ ದೂರುಗಳಿವೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನೀರಿನ ಸಮಸ್ಯೆ, ಒಳಚರಂಡಿ ಮುಂತಾದ ಸಣ್ಣ ಸಣ್ಣ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸದೆ, ತನ್ನ ಚೇಂಬರ್ನಲ್ಲಿ ಹೇಳಿದರೆ ಅದಕ್ಕೆ ಸೂಕ್ತ ಪರಿಹಾರ ಕೈಗೊಳ್ಳಲು ನೆರವಾಗುವೆ. ಒಂದು ಸಲ ನನ್ನಲ್ಲಿ ಕೆಲಸ ಆಗದಿದ್ದರೆ ನೀವು ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಆ ಬಗ್ಗೆ ನನ್ನ ಆಕ್ಷೇಪ ಇಲ್ಲ. ಯಾಕೆಂದರೆ ಸದನದ ಸಮಯ ಬಹಳ ಸೂಕ್ತವಾಗಿದ್ದು, ಸಣ್ಣ ಪುಟ್ಟ ವಿಷಯಗಳಿಗೆ ಚರ್ಚೆ ಮಾಡಿ ಆ ಸಮಯವನ್ನು ವ್ಯರ್ಥ ಮಾಡದೆ ಅಭಿವೃದ್ಧಿ ಕಡೆಗೆ ಮೀಸಲಾಗಿರಿಸಿ ಜನರೊಂದಿಗೆ ನಾನು ಸದಾ ಇರುತ್ತೇನೆ. ಜನರ ಯಾವುದೇ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತೇನೆ. ಅಲ್ಲದೆ ಪ್ರತಿ ದಿನ ಐದು ವಾರ್ಡ್ಗಳಿಗೆ ಭೇಟಿ ನೀಡುತ್ತೇನೆ. ಯಾವುದೇ ದೂರುಗಳಿಗೆ ಸ್ಪಂದಿಸುತ್ತೇನೆ. ಯಾವುದೇ ರಾಜಕೀಯ ಮಾಡದೆ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತೇನೆ. ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದು ಹೇಳಿದರು.
ಉಪ ಮೇಯರ್ ವೇದಾವತಿ ಮಾತನಾಡಿ, ಮುಂದಿನ ಅಧಿಕಾರಾವಧಿಯಲ್ಲಿ ಮೇಯರ್ ಜೊತೆಯಲ್ಲಿದ್ದುಕೊಂಡು, ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಹಾಗೂ ಎಲ್ಲಾ ಸದಸ್ಯರ ಜೊತೆ ಸೇರಿಕೊಂಡು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.