ಮಂಗಳೂರು: ನಗರದ ಎಜೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದ ಪ್ರಕೃತಿ ಶೆಟ್ಟಿ(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸೋಮವಾರ ಬೆಳಗ್ಗೆ ಮೂರು ಗಂಟೆ ವೇಳೆಗೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಂಗಳೂರು; ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ - ಎಂಬಿಬಿಎಸ್ ಓದುತ್ತಿದ್ದ ಬೆಳಗಾವಿ ಮೂಲದ ವಿದ್ಯಾರ್ಥಿನಿ
MBBS student suicide: ಎಂಬಿಬಿಎಸ್ ಓದುತ್ತಿದ್ದ ಬೆಳಗಾವಿ ಮೂಲದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Published : Nov 13, 2023, 3:53 PM IST
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಾನು ಜೀವನದಲ್ಲಿ ಹತಾಶಳಾಗಿದ್ದೇನೆ ಎಂದು ಉಲ್ಲೇಖ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರ ತಂದೆ ಪ್ರಶಾಂತ ಶೆಟ್ಟಿ ಮತ್ತು ತಾಯಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೆಲೆಸಿದ್ದು, ಪ್ರಕೃತಿ ಶೆಟ್ಟಿ ಹಾಸ್ಟೆಲ್ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ತಾಯಿ ಕಾರ್ಕಳ ಮೂಲದವರಾಗಿದ್ದು, ಡಾಕ್ಟರ್ ಕಲಿಯಬೇಕೆಂಬ ಕನಸಿನಲ್ಲಿ ಪುತ್ರಿಯನ್ನು ಎಜೆ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬ್ರಹ್ಮಕುಮಾರಿ ಆಶ್ರಮದಲ್ಲಿ ಇಬ್ಬರು ಸಹೋದರಿಯರು ನೇಣಿಗೆ ಶರಣು: ವಾಟ್ಸ್‌ಆ್ಯಪ್‌ನಲ್ಲಿ ಸೂಸೈಡ್ ನೋಟ್ ರವಾನೆ