ಮಂಗಳೂರು: ಪರೀಕ್ಷೆಯಲ್ಲಿ ಪಡೆದ ಅಂಕ ಕಡಿಮೆಯಾಯಿತು ಎಂದು ಮನನೊಂದು ಎಂಬಿಬಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಮೇಲಿನ ಏರಿಯಾದಲ್ಲಿ ನಡೆದಿದೆ.
ಪರೀಕ್ಷೆಯಲ್ಲಿ ಕಡಿಮೆ ಅಂಕ: ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿನಿ - ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿನಿ
ಪರಿಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
MBA Student commits suicide
ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿನಿ ರಕ್ಷಿತಾ(23) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿಯಾಗಿದ್ದು, ಅಮ್ಟಾಡಿ ನಿವಾಸಿ ಯಾದವ ಎಂಬುವವರ ಮಗಳು ಎಂದು ತಿಳಿದು ಬಂದಿದೆ.
ರಕ್ಷಿತಾ ಎಂಬಿಎ ಪ್ರಥಮ ಸೆಮಿಸ್ಟರ್ನಲ್ಲಿ ಅಂಕ ಕಡಿಮೆ ಬಂದಿವೆ ಎಂದು ಮನನೊಂದು ಈ ನಿರ್ಧಾರ ಕೈಗೊಂಡಿದ್ದು, ಮನೆಯ ಅಡುಗೆ ಕೋಣೆಯಲ್ಲಿ ಚೂಡಿದರ್ನ ವೇಲ್ ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.