ಕರ್ನಾಟಕ

karnataka

ಮಾತೃಪೂರ್ಣ ಯೋಜನೆ ಗರ್ಭಿಣಿಯರ ಮನೆಗೆ ತಲುಪಿಸುವ ವ್ಯವಸ್ಥೆ.. ಸಚಿವೆ ಶಶಿಕಲಾ ಜೊಲ್ಲೆ

By

Published : Feb 11, 2020, 8:26 PM IST

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮ ಶ್ರೀ ಧರ್ಮಸ್ಥಳದಲ್ಲಿ ನಡೆಯಿತು.

ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ

ಧರ್ಮಸ್ಥಳ:ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ದುಶ್ಚಟ ಮುಕ್ತರಾಗಿ ನವಜೀವನ ನಡೆಸುತ್ತಿರುವ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮವು ಇಲ್ಲಿನ ಅಮೃತ ವರ್ಷಿಣಿ ಸಭಾಭವನದಲ್ಲಿ ನಡೆಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ..

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ, ಕೆಲವೊಮ್ಮೆ ತಮ್ಮ ಪರಿಸ್ಥಿತಿಯಿಂದಾಗಿ ಕೆಲವರು ವ್ಯಸನಕ್ಕೆ ದಾಸರಾಗಿರಬಹುದು. ಬಳಿಕ ಅದರಿಂದ ಮುಕ್ತರಾಗುವುದು ತುಂಬಾ ಕಷ್ಟ. ಅಂತಹ ವ್ಯಸನಕ್ಕೆ ಬಲಿಯಾದವರನ್ನು ವ್ಯಸನ ಮುಕ್ತರಾಗಿಸುವ ಉತ್ತಮ ಕೆಲಸ‌ವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಹಾಗೂ ಹೇಮಾವತಿ ಹೆಗಡೆಯವರು ಮಾಡುತ್ತಿದ್ದಾರೆ ಎಂದರು.

ಡಾ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ದೇಹವನ್ನು ನಾನಾ ರೀತಿಯಲ್ಲಿ ಶುದ್ಧಿ ಮಾಡಬಹುದು. ಅದಕ್ಕೆ ವ್ಯವಸ್ಥೆ ಕೂಡ ಇದೆ. ದೇಹ ಶುದ್ಧವಾದರೆ ಸಾಕಾಗುವುದಿಲ್ಲ, ಅಂತರಂಗ ಶುದ್ಧಿ ಆಗಬೇಕು. ಕುಡುಕರಿಗೆ ಸ್ವಂತ ಪ್ರಜ್ಞೆ ಎಂಬುದು ಇರೋದಿಲ್ಲ. ಹಾಗಾಗಿ ಕುಡಿತ ಬಿಟ್ಟು ನವ‌ಜೀವನ ಆರಂಭಿಸಿದವರು ಜೀವನದಲ್ಲಿ ಮೇಲೆ ಬರುತ್ತಾರೆ ಎಂದರು.

ABOUT THE AUTHOR

...view details