ಕರ್ನಾಟಕ

karnataka

ಸುಳ್ಯದ ರಬ್ಬರ್​ ಸ್ಮೋಕ್​ ಹೌಸ್​ಗೆ ಬೆಂಕಿ... ಅಪಾರ ಪ್ರಮಾಣದ ಹಾನಿ!

By

Published : Aug 13, 2020, 1:42 AM IST

ಸುಳ್ಯದ ರಬ್ಬರ್​ ಸ್ಮೋಕ್​ ಹೌಸ್​ಗೆ ಏಕಾಏಕಿ ಬೆಂಕಿ ತಗುಲಿರುವ ಪರಿಣಾಮ 3 ಲಕ್ಷಕ್ಕೂ ಅಧಿಕ ಮೌಲ್ಯದ ಹಾನಿ ಉಂಟಾಗಿದೆ.

rubber smoke factory sullia
rubber smoke factory sullia

ಸುಳ್ಯ(ದಕ್ಷಿಣ ಕನ್ನಡ): ಇಲ್ಲಿನ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿರುವ ರಬ್ಬರ್​ ಒಣಗಿಸುವ ಸ್ಮೋಕ್​​ ಹೌಸ್​ಗೆ ಬೆಂಕಿ ತಗುಲಿದ್ದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಸುಳ್ಯದ ರಬ್ಬರ್​ ಸ್ಮೋಕ್​ ಹೌಸ್​ಗೆ ಬೆಂಕಿ

ನಿನ್ನೆ ರಾತ್ರಿ ಆಕಸ್ಮಿಕವಾಗಿ ಪ್ಯಾಕ್ಟರಿಗೆ ಬೆಂಕಿ ತಗುಲಿದೆ. ಅಂದಾಜು 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಬೆಂಕಿಗಾಹುತಿಯಾಗಿವೆ. ರಬ್ಬರ್​ ಒಣಗಿಸುವ ಸ್ಮೋಕ್​ ಹೌಸ್​​ ಸೇರಿದಂತೆ ದಾಸ್ತಾನು ಮಾಡಲಾಗಿದ್ದ ರಬ್ಬರ್​ ಶೀಟ್​​ ಕೂಡ ಸುಟ್ಟು ಕರಕಲಾಗಿವೆ.

ತಕ್ಷಣವೇ ಸುಳ್ಯ ಅಗ್ನಿಶಾಮಕ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ABOUT THE AUTHOR

...view details