ಕರ್ನಾಟಕ

karnataka

ETV Bharat / state

ಗಡಾಯಿಕಲ್ಲಿನಲ್ಲಿ ಭಾರೀ ಸ್ಫೋಟದೊಂದಿಗೆ ಕುಸಿದು ಬಿದ್ದ ಬಂಡೆ : ಸ್ಥಳೀಯರು ಗಾಬರಿ - Belthangadi stone explosion

ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತಿದ್ದಾರೆ. ಶಬ್ದ ಸುಮಾರು 1 ಕಿ.ಮೀ ಗೂ ಹೆಚ್ಚು ದೂರ ಕೇಳಿಸಿದ್ದು, ಸುತ್ತಮುತ್ತಲಿನ ನಾಗರಿಕರನ್ನು ಬೆಚ್ಚಿ ಬೀಳಿಸಿದೆ..

massive-explosion-of-stone-in-belthangadi
ಗಡಾಯಿಕಲ್ಲಿನಲ್ಲಿ ಭಾರೀ ಸ್ಫೋಟದೊಂದಿಗೆ ಕುಸಿದು ಬಿದ್ದ ಬಂಡೆ

By

Published : May 2, 2021, 3:42 PM IST

ಬೆಳ್ತಂಗಡಿ : ತಾಲೂಕಿನ ಇತಿಹಾಸ ಪ್ರಸಿದ್ಧ ನಡ ಗ್ರಾಮದ ಗಡಾಯಿಕಲ್ಲಿನಲ್ಲಿ ಇವತ್ತು ಬೆಳಗ್ಗೆ ಭಾರೀ ಶಬ್ದದೊಂದಿಗೆ ಬಂಡೆಕಲ್ಲಿನ ಒಂದು ಭಾಗ ತುಂಡಾಗಿ ಕೆಳಗೆ ಕುಸಿದು ಬಿದ್ದಿದೆ.

ಕಳೆದ ರಾತ್ರಿ ಭಾರೀ ಮಳೆ ಸುರಿದಿರುವುದರಿಂದ ಈ ವೇಳೆ ಸಿಡಿಲು ಹೊಡೆದು ಬಂಡೆ ತುಂಡಾಗಿ ಕೆಳಗೆ ಬಿದ್ದಿರಬಹುದೆಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ವರ್ಷ ಕೂಡ ಇದೇ ರೀತಿ ಬಂಡೆಯ ತುಂಡೊಂದು ತುಂಡಾಗಿ ಬಿದ್ದು ಜನರು ಆತಂಕ ಪಡುವಂತಾಗಿತ್ತು. ಈ ಬಾರಿಯೂ ಶಬ್ದವು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತಿದ್ದಾರೆ. ಶಬ್ದ ಸುಮಾರು 1 ಕಿ.ಮೀ ಗೂ ಹೆಚ್ಚು ದೂರ ಕೇಳಿಸಿದ್ದು, ಸುತ್ತಮುತ್ತಲಿನ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

ಓದಿ:ರಾಜ್ಯದ ಅನೇಕ ಕಡೆಗಳಲಿಲ್ಲ ಸೂಕ್ತ ಒಳಚರಂಡಿ ವ್ಯವಸ್ಥೆ - ನೈರ್ಮಲ್ಯಕ್ಕೆ ಅಡ್ಡಿ

ABOUT THE AUTHOR

...view details