ಸುಳ್ಯ:ಸರ್ಕಾರದ ಆದೇಶದಂತೆ ತಾ.ಪಂ.ಪಂಚಾಯತ್ ಆಶ್ರಯದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕಡಬ, ನೆಲ್ಯಾಡಿಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು.
ಸುಳ್ಯ, ಕಡಬ ತಾಲೂಕಿನ ವಿವಿಧೆಡೆ ಮಾಸ್ಕ್ ದಿನಾಚರಣೆ
ತಾಲೂಕು ಪಂಚಾಯತ್ ಆಶ್ರಯದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕಡಬ, ನೆಲ್ಯಾಡಿಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು.
ಮಾಸ್ಕ್ ದಿನಾಚರಣೆ
ಸುಳ್ಯ ಮತ್ತು ಕಡಬದಲ್ಲಿ ಆಯಾ ಪ್ರದೇಶಗಳ ತಹಶೀಲ್ದಾರರ ನೇತೃತ್ವದಲ್ಲಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಜಾಥಾಗಳು ನಡೆಯಿತು. ತಾಲೂಕಿನ ತಹಶೀಲ್ದಾರರಾದ ಅನಂತ್ ಶಂಕರ್ ಸುಳ್ಯದಲ್ಲಿ ಮತ್ತು ತಹಶೀಲ್ದಾರ ಜಾನ್ ಪ್ರಕಾಶ್ ಕಡಬದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು.
ಈ ವೇಳೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ, ತಾಲೂಕು ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.