ಕರ್ನಾಟಕ

karnataka

ETV Bharat / state

ಮದುವೆಗೆ ಅನುಮತಿ ಪಡೆದು ಮೆಹಂದಿ ಸಮಾರಂಭದಲ್ಲಿ ನೃತ್ಯ: ಕೋಣಾಜೆ ಠಾಣೆಯಲ್ಲಿ ದೂರು ದಾಖಲು

ಮಂಗಳೂರಿನ ಪಾವೂರಿನಲ್ಲಿ ಮೇ 20ರಂದು ತಮ್ಮ ಮಗಳ ಮದುವೆ ಕಾರ್ಯಕ್ರಮ ನಡೆಸಲು ಶೋಭ ಎಂಬುವರು ಪಾವೂರು ಪಂಚಾಯತಿಯಿಂದ ಅನುಮತಿ ‌ಪಡೆದಿದ್ದರು. ಮದುವೆಗೆ ಮಾತ್ರ ಅನುಮತಿ ಪಡೆದ ವಧುವಿನ ಕಡೆಯವರು ಮದುವೆಯ ಮುನ್ನ ದಿನ ರಾತ್ರಿ ಮೆಹಂದಿ ಕಾರ್ಯಕ್ರಮದಲ್ಲಿ ಸಾಮೂಹಿಕ ನೃತ್ಯ ಮಾಡಿ, ಲಾಕ್​ಡೌನ್ ನಿಯಮ ಉಲ್ಲಂಘಿಸಿದ್ದಾರೆ.

Mehndi dance with permission for marriage
ಮದುವೆಗೆ ಅನುಮತಿ ಪಡೆದು ಮೆಹಂದಿ ನೃತ್ಯ

By

Published : May 27, 2021, 10:54 PM IST

ಮಂಗಳೂರು: ಕೊರೊನಾ ಲಾಕ್​​ಡೌನ್ ಮಾರ್ಗಸೂಚಿಯಂತೆ ಮದುವೆಗೆ ಅನುಮತಿ ಪಡೆದು, ವಿವಾಹದ ಮುನ್ನದ ಮೆಹಂದಿ ಕಾರ್ಯಕ್ರಮದಲ್ಲಿ ಗುಂಪುಗೂಡಿ ನೃತ್ಯ ಮಾಡಿದ ಆರೋಪದಡಿ ಮಂಗಳೂರಿನ ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಓದಿ: ಹುಡುಗಿಯನ್ನು ಹಿಂಸಿಸುತ್ತಿರುವ ದುಷ್ಕರ್ಮಿಗಳ ವಿಡಿಯೋ ವೈರಲ್​: ಜನರ ಸಹಾಯ ಕೋರಿದ ಅಸ್ಸೋಂ ಪೊಲೀಸರು

ಮಂಗಳೂರಿನ ಪಾವೂರಿನಲ್ಲಿ ಮೇ 20ರಂದು ತಮ್ಮ ಮಗಳ ಮದುವೆ ಕಾರ್ಯಕ್ರಮ ನಡೆಸಲು ಶೋಭ ಎಂಬುವರು ಪಾವೂರು ಪಂಚಾಯತಿಯಿಂದ ಅನುಮತಿ ‌ಪಡೆದಿದ್ದರು. ಮದುವೆಗೆ ಮಾತ್ರ ಅನುಮತಿ ಪಡೆದ ವಧುವಿನ ಕಡೆಯವರು ಮದುವೆಯ ಮುನ್ನ ದಿನ ರಾತ್ರಿ ಮೆಹಂದಿ ಕಾರ್ಯಕ್ರಮ ಆಯೋಜಿಸಿದ್ದರು.

ಮದುವೆಗೆ ಅನುಮತಿ ಪಡೆದು ಮೆಹಂದಿ ನೃತ್ಯ

ಅನುಮತಿ ಇಲ್ಲದಿದ್ದರೂ ಧ್ವನಿವರ್ಧಕ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೃತ್ಯ ಮಾಡಿದ್ದಾರೆ. ಇದರ ವಿಡಿಯೋ ಗಮನಕ್ಕೆ ಬಂದ ಬಳಿಕ ಪಾವೂರು ಪಂಚಾಯತಿ ಪಿಡಿಓ ಸುಧಾರಾಣಿ ಅವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿರುವುದರಿಂದ ಕಾನೂನು ಕ್ರಮ ಕೈಗೊಳ್ಳುವಂತೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಸೂಚಿಸಿದ್ದಾರೆ. ಅವರ ಆದೇಶ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.

ABOUT THE AUTHOR

...view details