ಕರ್ನಾಟಕ

karnataka

ETV Bharat / state

ಗಾಂಜಾ ಪ್ರಕರಣ: ಮತ್ತೆ ಇಬ್ಬರು ವೈದ್ಯರು ಸೇರಿದಂತೆ 9 ಮಂದಿ ಬಂಧನ.. ಬಂಧಿತರ ಸಂಖ್ಯೆ 24 ಕ್ಕೆ ಏರಿಕೆ! - ಮಂಗಳೂರು ನಗರ ಪೊಲೀಸ್ ಕಮೀಷನರ್

ಮಂಗಳೂರು ಗಾಂಜಾ ಪ್ರಕರಣ - ಮತ್ತೆ ಇಬ್ಬರು ವೈದ್ಯರು ಹಾಗೂ ಏಳು ವಿದ್ಯಾರ್ಥಿಗಳು ಸೇರಿ 9 ಮಂದಿ ಬಂಧನ - ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾಹಿತಿ

arrested in marijuana case
ಗಾಂಜಾ ಪ್ರಕರಣದಲ್ಲಿ ಬಂಧಿತರು

By

Published : Jan 21, 2023, 4:52 PM IST

ಗಾಂಜಾ ಪ್ರಕರಣ ಮತ್ತು ಬಂಧಿತರ ಕುರಿತು ನಗರ ಪೊಲೀಸ್​ ಆಯುಕ್ತರ ಮಾಹಿತಿ

ಮಂಗಳೂರು: ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಒಂಬತ್ತು ಮಂದಿಯನ್ನು ಬಂಧಿಸಿದ್ದು, ಈವರೆಗೆ ಬಂಧಿತರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ. ಈಗ ಬಂಧಿಸಿರುವ 9 ಜನರಲ್ಲಿ ಇಬ್ಬರು ವೈದ್ಯರು ಇದ್ದು, ಏಳು ಮಂದಿ ವಿದ್ಯಾರ್ಥಿಗಳಾಗಿದ್ದಾರೆ.

ಗಾಂಜಾ ಪ್ರಕರಣದಲ್ಲಿ ಬಂಧಿತರು: ಕೆಎಂಸಿ ಮಂಗಳೂರಿನ ಉತ್ತರ ಪ್ರದೇಶದ ಡಾ ವಿಧುಸ್ ಕುಮಾರ್ (27), ಕೆ ಎಂ ಸಿ ಮಂಗಳೂರಿನ ದೆಹಲಿಯ ಡಾ ಶರಣ್ಯ (23), ಶ್ರೀನಿವಾಸ ಆಸ್ಪತ್ರೆಯ ಕರ್ನಾಟಕದ ಡಾ ಸಿದ್ದಾರ್ಥ ಪವಸ್ಕರ್ (29) , ಕೆ ಎಂ ಸಿ ಮಂಗಳೂರಿನ ಕೇರಳದ ಡಾ ಸೂರ್ಯಜಿತ್ ದೇವ್ (20), ಕೇರಳದ ಡಾ ಆಯಿಶಾ ಮೊಹಮ್ಮದ್ (23), ತೆಲಂಗಾಣದ ಡಾ. ಪ್ರಣಯ್ ನಟರಾಜ್ (24) ತೆಲಂಗಾಣದ ಡಾ ಚೈತನ್ಯ ತುಮುಲೂರಿ (23), ದುರ್ಗಾ ಸಂಜೀವಿನಿ ಆಸ್ಪತ್ರೆಯ ಕರ್ನಾಟಕದ ಡಾ ಸುಧೀಂದ್ರ (34) ಮತ್ತು ಕೆ ಎಂ ಸಿ ಮಂಗಳೂರಿನ, ಉತ್ತರಪ್ರದೇಶದ ಡಾ ಇಶ್ ಮಿದ್ದಾ (27) ಬಂಧಿತರು.

ಜನವರಿ 7 ರಂದು ಬಿಡಿಎಸ್ ವಿದ್ಯಾರ್ಥಿ ಯುಕೆಯ ನೀಲ್ ಕಿಶೋರ್ ಲಾಲ್ ರಾಮ್ಜಿ ಶಾ (38) ಎಂಬಾತನ ಪ್ಲಾಟ್ ಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಆತನಿಂದ ಎರಡು ಕೆ ಜಿ ಗಾಂಜಾ, ಆಟಿಕೆ ಪಿಸ್ತೂಲ್ , ಎರಡು ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕ‌ಮಾಪನ ವಶಪಡಿಸಿಕೊಂಡಿದ್ದರು. ಪೊಲೀಸರು ಆತನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟದ ಜಾಲದ ಮಾಹಿತಿ ಸಿಕ್ಕಿತ್ತು. ತತ್​ಕ್ಷಣ ಪೊಲೀಸರು ದಾಳಿ ನಡೆಸಿ ಮತ್ತೆ 14 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ 9 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.

ಗಾಂಜಾ ದಂಧೆ ಭೇದಿಸಿದ್ದ ಪೊಲೀಸರು: ಬಂಧಿತ ರಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿದ್ದು, ಇವರಲ್ಲಿ ವಿದ್ಯಾರ್ಥಿನಿಯರು ಸೇರಿದ್ದಾರೆ. ಇವರೆಲ್ಲ ಪ್ರಮುಖ ಡ್ರಗ್ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜಿಯಿಂದ ಗಾಂಜಾವನ್ನು ಪಡೆದು ಸೇವನೆ ಮತ್ತು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ವಾಸವಿದ್ದ ಸಾಗರೋತ್ತರ ವಿದ್ಯಾರ್ಥಿ ಯುಕೆಯ ನೀಲ್ ಕಿಶೋರಿಲಾಲ್ ರಾಮ್ಜಿ ಶಾ ( 38) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಜನವರಿ 7 ರಂದು ಬಂಧಿಸಿದ್ದರು. ಈತ 2006-07 ರ ಬಿಡಿಎಸ್ ವಿದ್ಯಾರ್ಥಿಯಾಗಿದ್ದು ವೀಸಾವನ್ನು ವಿಸ್ತರಿಸಿ ಮಂಗಳೂರಿನಲ್ಲಿ ನೆಲೆ ನಿಂತಿದ್ದನು.

ಹಿಂದೆಯೂ ಬಂಧಿತರಲ್ಲಿ ವೈದ್ಯರು ವಿದ್ಯಾರ್ಥಿಗಳು:ಈತನಿಂದ ಗಾಂಜಾ ಪಡೆದು ಸೇವನೆ ಮಾಡುತ್ತಿದ್ದ ಮಂಗಳೂರು ಕೆ ಎಂ ಸಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಕೇರಳದ ಡಾ ಶಮೀರ್ ( 32), ಕೆಎಂಸಿ ಮಣಿಪಾಲದಲ್ಲಿ ಮೆಡಿಕಲ್ ಸರ್ಜನ್ ಆಗಿರುವ ತಮಿಳುನಾಡಿನ ಡಾ ಮಣಿಮಾರನ್ ಮುತ್ತು ( 28), ಕೆ ಎಂ ಸಿ ಮಂಗಳೂರಿನಲ್ಲಿ ಎಂ ಬಿ ಬಿ ಎಸ್ ವಿದ್ಯಾರ್ಥಿನಿ ಕೇರಳದ ಡಾ ನಾದಿಯಾ ಸಿರಾಜ್ (24), ವಿದ್ಯಾರ್ಥಿನಿ ಆಂಧ್ರಪ್ರದೇಶದ ಡಾ ವರ್ಷಿಣಿ ಪ್ರತಿ (26), ಕೆಎಂಸಿ ಮಂಗಳೂರಿನ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ ಚಂಡೀಗಢ ಪಂಜಾಬ್ ನ ಡಾ ರಿಯಾ ಚಡ್ಡ (22),

ಕೆ ಎಂ ಸಿ ಮಂಗಳೂರಿನ ಮೂರನೇ ವರ್ಷದ ಎಂ ಎಸ್ ಆರ್ಥೋ ವಿದ್ಯಾರ್ಥಿ ದೆಹಲಿಯ ಡಾ ಕ್ಷಿತಿಜ್ ಗುಪ್ತ (25), ಕೆ ಎಂ ಸಿ ಮಂಗಳೂರಿನ ನಾಲ್ಕನೆ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಪುಣೆಯ ಡಾ ಇರಾ ಬಾಸಿನ್ (23), ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ಮೂರನೇ ವರ್ಷದ ಎಂ ಡಿ ಪಿಸಿಯಾಟ್ರಿಕ್ ವಿದ್ಯಾರ್ಥಿನಿ ಪಂಜಾಬ್ ಚಂಡಿಗಡದ ಡಾ ಭಾನು ದಾಹಿಯಾ (27) ಬಂಟ್ವಾಳ ತಾಲೂಕಿನ ಮೊಹಮ್ಮದ್ ರೌಫ್ ಯಾನೆ ಗೌಸ್ (34).

ವೈದ್ಯಕೀಯ ವಿದ್ಯಾರ್ಥಿಗಳಾದ ಕರಾವಳಿ ಕಾಲೇಜಿನ ಫಾರ್ಮಾ ಡಿ ವಿದ್ಯಾರ್ಥಿ ಕೇರಳದ ಕೊಚ್ಚಿನ್ ನ ಅಡೋನ್ ದೇವ್, ಕೆ ಎಂ ಸಿ ಯ ಅಂತಿಮ ವರ್ಷದ ಪೆಥೊಲಜಿ ಎಂ ಡಿ ವಿದ್ಯಾರ್ಥಿ ತುಮಕೂರಿನ ಹರ್ಷ ಕುಮಾರ್ ಮತ್ತು ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ಕಸಬ ಬೆಂಗ್ರೆಯ ಮೊಹಮ್ಮದ್ ಅಫ್ರಾರ್ (23) ಅವರನ್ನು ಈಗಾಗಲೇ ಬಂಧಿಸಿದ್ದರು. ಇಂದು ಒಂಭತ್ತು ಮಂದಿಯನ್ನು ಬಂಧಿಸಲಾಗಿದೆ.

ಕೆಎಂಸಿಯಿಂದ ಅಮಾನತು: ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿದ್ದ ತನ್ನ ಸಂಸ್ಥೆಯ ಇಬ್ಬರು ವೈದ್ಯರು ಡಾ ಬಾಲಾಜಿ, ಡಾ ಶಮೀರ್ , ವಿದ್ಯಾರ್ಥಿಗಳಾದ ಡಾ ನಾದೀಯಾ ಸಿರಾಜ್, ಡಾ ವರ್ಷಿಣಿ ಪ್ರತಿ, ಡಾ ರಿಯಾ ಚಡ್ಡ, ಡಾ ಕ್ಷಿತಿಜ್ ಗುಪ್ತ , ಡಾ ಇರಾ ಬಾಸಿನ್, ಹರ್ಷ ಕುಮಾರ್, ಡಾ ಕಿಶೋರಿ ಲಾಲ್ ಅವರನ್ನು ಕೆ ಎಂ ಸಿ ಸಂಸ್ಥೆಯು ಅಮಾನತು ಮಾಡಿದೆ ಎಂದು ಡೀನ್ ಉನ್ನಿಕೃಷ್ಣನ್ ಅವರು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರನ್ನು ಭೇಟಿ ಮಾಡಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಸಮಗ್ರ ತನಿಖೆ: ಗಾಂಜಾ ಸೇವನೆ ಹಾಗೂ ಮಾರಾಟದ ಪ್ರಕರಣದಲ್ಲಿ ಈಗ ಮತ್ತೆ ಒಂಬತ್ತು ಮಂದಿಯನ್ನು ಬಂಧಿಸಿ,ಆರೋಪಿಗಳನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದೇವೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಮಗ್ರ ತನಿಖೆ ಕೈಗೊಂಡಿದೆ. ಶಿಕ್ಷಣ ಕಾಶಿ ಮಂಗಳೂರಿನಲ್ಲಿ ಒಟ್ಟಾರೆ ಏಂಟು ವೈದ್ಯ ಕಾಲೇಜುಗಳಿದ್ದು, ಇದರ ಬಗ್ಗೆ ಪೊಲೀಸ್​ ಇಲಾಖೆ ಹೆಚ್ಚು ನಿಗಾ ವಹಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಆನ್​​ಲೈನ್ ಕ್ಲಾಸ್ ಇದ್ದುದ್ದರಿಂದ ಇಂಥ ಪ್ರಕರಣಗಳು ಕಂಡು ಬಂದಿರಲಿಲ್ಲ. ಆದರೆ ಈಗ ಆಫ್​​ಲೈನ್ ಕ್ಲಾಸ್ ಶುರುವಾಗಿದೆ. ಈಗ ಗಾಂಜಾ ಮಾರಾಟ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂಓದಿ:ಜಮ್ಮು ಕಾಶ್ಮೀರದ ನರ್ವಾಲದಲ್ಲಿ ಅವಳಿ ಬಾಂಬ್​ ಸ್ಫೋಟ, 6 ಮಂದಿಗೆ ಗಾಯ

ABOUT THE AUTHOR

...view details