ಕಡಬ:ತಾಲೂಕಿನ ಕುಂತೂರು ಎಂಬಲ್ಲಿ ಗಾಂಜಾ ಸೇವಿಸಿ ನಶೆಯಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಡಬದಲ್ಲೂ ಗಾಂಜಾ ಅಮಲು: ನಶೆಯಲ್ಲಿದ್ದ ಯುವಕ ಪೊಲೀಸರ ವಶಕ್ಕೆ..!! - marijuana accused arrested by kadabha police
ಕಡಬದ ಕುಂತೂರು ಸಮೀಪ ಗಾಂಜಾ ಸೇವಿಸಿ ನಶೆಯಲ್ಲಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಂಜಾ ಸೇವಿಸಿ ನಶೆಯಲ್ಲಿದ್ದ ಯುವಕನನ್ನು ಬಂಧಿಸಿದ ಕಡಬ ಪೊಲೀಸರು
ಗಸ್ತು ತಿರುಗುತ್ತಿದ್ದ ಪೊಲೀಸರು ಕಡಬದ ಕುಂತೂರು ಸಮೀಪ ಬೈಕ್ ಒಂದನ್ನು ಪರಿಶೀಲನೆ ನಡೆಸಿದಾಗ ಜುನೈದ್ (19) ಎಂಬ ಯುವಕ ಗಾಂಜಾ ಸೇವಿಸಿ ನಶೆಯಲ್ಲಿರುವುದು ತಿಳಿದುಬಂದಿದೆ. ಈತನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಸೇವಿಸಿರುವುದನ್ನು ದೃಢಪಡಿಸಿಕೊಂಡಿದ್ದಾರೆ.
ನಂತರ ಆರೋಪಿಯನ್ನು ದಸ್ತಗಿರಿ ಮಾಡಿರುವ ಪೊಲೀಸರು, ಬೈಕ್ನ್ನು ವಶಕ್ಕೆ ತೆಗೆದುಕೊಂಡು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.