ಮಂಗಳೂರು: ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮರವೂರು ಸೇತುವೆಯಲ್ಲಿ ಬಿರುಕುಬಿಟ್ಟ ಒಂದೂವರೆ ತಿಂಗಳಲ್ಲಿ ದುರಸ್ತಿ ಮಾಡಲಾಗಿದ್ದು ನಾಳೆ (ಜು.30) ಮಧ್ಯಾಹ್ನದ ಬಳಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ದುರಸ್ತಿಯಾದ ಬಿರುಕುಬಿಟ್ಟ ಮರವೂರು ಸೇತುವೆ: ಜುಲೈ 30ರಂದು ಸಂಚಾರಕ್ಕೆ ಮುಕ್ತ - ಮಂಗಳೂರು ವಿಮಾನ ನಿಲ್ದಾಣ ಮರವೂರು ಸೇತುವೆ ಸಂಚಾರ ಮುಕ್ತ
ಮರವೂರು ಸೇತುವೆಯ ದುರಸ್ತಿ ಕಾರ್ಯ ಮಾಡಲಾಗಿದ್ದು, ಜುಲೈ 30 ಮಧ್ಯಾಹ್ನದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ. ಹೇಳಿದರು.

ಜೂನ್ 15 ರಂದು ಬೆಳಿಗ್ಗೆ 3ಗಂಟೆ ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಮರವೂರು ಸೇತುವೆಯ ಪಿಲ್ಲರ್ ಸ್ವಲ್ಪ ಕುಸಿದು ಬಿರುಕು ಕಾಣಿಸಿಕೊಂಡಿತ್ತು. ಮುಂಜಾಗೃತ ಕ್ರಮವಾಗಿ ಏರ್ ಪೋರ್ಟ್ಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿತ್ತು. ಅಲ್ಲದೆ ಸೇತುವೆಯ ಪಿಲ್ಲರ್ನ್ನು ಸರಿಪಡಿಸಲು ಶೀಘ್ರ ಕ್ರಮಕೈಗೊಳ್ಳಲಾಗಿತ್ತು.
ತಂತ್ರಜ್ಞಾನದ ಮೂಲಕ ಪಿಲ್ಲರನ್ನು ಮೇಲಕ್ಕೆತ್ತಿ ಸರಿಪಡಿಸಲಾಗಿದೆ. ದುರಸ್ತಿಗೊಳಿಸಲಾದ ಸೇತುವೆಯ ಸಾಮರ್ಥ್ಯವನ್ನು ಇಂದು ಪರೀಕ್ಷಿಸಲಾಗಿದ್ದು, ವಾಹನ ಓಡಾಟಕ್ಕೆ ಯೋಗ್ಯವೆಂದು ಕಂಡುಬಂದಿದೆ. ಜುಲೈ 30 ಮಧ್ಯಾಹ್ನದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ತಿಳಿಸಿದ್ದಾರೆ.