ಕರ್ನಾಟಕ

karnataka

ETV Bharat / state

'ಸರಪ ಕರೈಬ್' ಎಂದು ರಾತ್ರೋರಾತ್ರಿ ಪ್ರಸಿದ್ಧಿ ಹೊಂದಿದ ಕುಡ್ಲದ ಪೋರ : ವಿಡಿಯೋ ವೈರಲ್ - Kudla boy Abdurrahman video is viral

ಈ ಪೋರ ಸಬ್ಸ್​​ಕ್ರೈಬ್ ಆಗಿ ಎನ್ನಲು ಪರದಾಡಿರುವ ವಿಡಿಯೋ ಸೆಲೆಬ್ರಿಟಿಗಳ ಗಮನವನ್ನು ಸೆಳೆದಿದ್ದು, ಬಹುಭಾಷಾ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್​ ಕೂಡ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ‌. ಕಾಮಿಡಿಯನ್ ಆಶಿಶ್ ಚಂಚ್ಲಾನಿ ಕೂಡ ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು 37 ಲಕ್ಷಕ್ಕೂ ಅಧಿಕ ವೀವ್ಸ್ ಆಗಿದೆ..

manglore
ಬಾಲಕ ಅಬ್ದುರ್ರಹ್ಮಾನ್

By

Published : Aug 9, 2020, 4:57 PM IST

ಮಂಗಳೂರು : ನಾನೊಂದು ಹೊಸ ವಿಡಿಯೋ ಮಾಡಿದ್ದು, ಅದಕ್ಕೆ ಒಂದು ಮಿಲಿಯನ್ ಲೈಕ್ ಬರಬೇಕು. ಆದ್ದರಿಂದ ಎಲ್ಲರೂ ಸಬ್ಸ್​​ಕ್ರೈಬ್ ಆಗಿ ಎನ್ನಲು ಹೋಗಿ ಪರದಾಡಿ 'ಸರಪ ಕರೈಬ್' ಎಂದು ಹೇಳಿ ಕುಡ್ಲದ ಪೋರನೋರ್ವ ರಾತ್ರೋರಾತ್ರಿ ಪ್ರಸಿದ್ಧಿಯಾಗಿದ್ದಾನೆ.

ಮಂಗಳೂರಿನ ತೊಕ್ಕೊಟ್ಟು ನಿವಾಸಿ, ಬಬ್ಬುಕಟ್ಟೆ ಹಿರಾ ಪ್ರಾಥಮಿಕ ಶಾಲೆಯ 6ನೇ ತರಗತಿ ಬಾಲಕ ಅಬ್ದುರ್ರಹ್ಮಾನ್ ಸರಪ ಕರೈಬ್ ಎಂದು ಹೇಳಿ ಪರದಾಡಿ ಪ್ರಸಿದ್ಧಿಯಾದ ಬಾಲಕ. ಈತ ಯೂಟ್ಯೂಬ್ ಚಾನೆಲ್​ಗೆ ಹೊಸ ವಿಡಿಯೋ ಅಪ್ಲೋಡ್ ಮಾಡಿ ಒಂದು ಮಿಲಿಯನ್ ಲೈಕ್ ಬರಬೇಕು. ಎಲ್ಲರೂ ಯೂಟ್ಯೂಬ್ ಚ್ಯಾನೆಲ್​​ಗೆ ಸಬ್ಸ್​​ಕ್ರೈಬ್ ಆಗಿ ಎಂದು ಪ್ರಚಾರ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಈಗ ಟ್ರೆಂಡ್ ಸೆಟ್ ಆಗಿದೆ. ಸಾಕಷ್ಟು ಮಂದಿ ಸ್ಟೇಟಸ್ ಹಾಕಿಕೊಂಡಿದ್ದಾರೆ‌. ಜೊತೆಗೆ ಟ್ರೋಲ್ ಕೂಡ ಆಗಿದೆ‌.

ಬಾಲಕ ಅಬ್ದುರ್ರಹ್ಮಾನ್ ಪ್ರಚಾರ ಮಾಡಿದ್ದ ವಿಡಿಯೋ ..

ಇದಿಷ್ಟೇ ಅಲ್ಲದೆ ಈ ಪೋರ ಸಬ್ಸ್​​ಕ್ರೈಬ್ ಆಗಿ ಎನ್ನಲು ಪರದಾಡಿರುವ ವಿಡಿಯೋ ಸೆಲೆಬ್ರಿಟಿಗಳ ಗಮನವನ್ನು ಸೆಳೆದಿದ್ದು, ಬಹುಭಾಷಾ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್​ ಕೂಡ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ‌. ಕಾಮಿಡಿಯನ್ ಆಶಿಶ್ ಚಂಚ್ಲಾನಿ ಕೂಡ ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು 37 ಲಕ್ಷಕ್ಕೂ ಅಧಿಕ ವೀವ್ಸ್ ಆಗಿದೆ.

ಬಾಲಕ ಅಬ್ದುರ್ರಹ್ಮಾನ್ ವಿಡಿಯೋಗೆ ನಟರೂ ಕೂಡ ಕಮೆಂಟ್​​ ಮಾಡಿದ್ದಾರೆ
ಬಹುಭಾಷಾ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್​ ಕೂಡ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ‌.

ಕೇವಲ 30 ಸೆಕೆಂಡ್​​ನ ವಿಡಿಯೋ ಮೂಲಕ ಈ ಪೋರ ಎಲ್ಲರ ಮನಸ್ಸು ಸೆಳೆದಿದ್ದು, ತನ್ನ ತಾಯಿಯ ಮೊಬೈಲ್​​ನಲ್ಲಿ ಸೆಲ್ಫೀ ವಿಡಿಯೋ ಮಾಡಿದ್ದ. ಆದರೆ, ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾನೆ.

ABOUT THE AUTHOR

...view details