ಕರ್ನಾಟಕ

karnataka

ETV Bharat / state

ನನ್ನ ಕುಮಾರಸ್ವಾಮಿ ಭೇಟಿ ಭದ್ರತಾ ಭೇಟಿಯೇ ವಿನಃ ಬೇರೇನೂ ಅಲ್ಲ: ಡಾ‌. ಪಿ.ಎಸ್. ಹರ್ಷ - Police Commissioner Dr.PSHarsha tweet

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಗಳೂರಿಗೆ ಬಂದಿದ್ದು, ಅವರನ್ನು ಭೇಟಿಯಾಗಿ ಸಂವಹನ ನಡೆಸಿದ್ದೇನೆ. ಇದು ಭದ್ರತಾ ಭೇಟಿಯೇ ವಿನಃ ಬೇರೇನೂ ಅಲ್ಲವೆಂದು ನಗರ ಪೊಲೀಸ್ ಆಯುಕ್ತ ಡಾ‌.ಪಿ.ಎಸ್.ಹರ್ಷ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

manglore
ಪೊಲೀಸ್ ಆಯುಕ್ತ ಡಾ‌.ಪಿ.ಎಸ್.ಹರ್ಷ

By

Published : Jan 21, 2020, 11:11 PM IST

ಮಂಗಳೂರು:ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಗಳೂರಿಗೆ ಬಂದಿದ್ದು, ಅವರನ್ನು ಭೇಟಿಯಾಗಿ ಸಂವಹನ ನಡೆಸಿದ್ದೇನೆ. ಇದು ಭದ್ರತಾ ಭೇಟಿಯೇ ವಿನಃ ಬೇರೇನೂ ಅಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ‌. ಪಿ.ಎಸ್.ಹರ್ಷ ಟ್ವೀಟ್ ಮೂಲಕ ತಿಳಿಸಿದ್ದಾರೆ‌.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹ ಓರ್ವ ರಕ್ಷಕ. ಮಂಗಳೂರಿನ ಪ್ರಸ್ತುತ ಸನ್ನಿವೇಶದ ಕುರಿತು ಅವರೊಂದಿಗೆ ಸಂಕ್ಷಿಪ್ತ ಸಂವಾದ ನಡೆಸಿದ್ದೇನೆ‌‌. ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರ ಸಹಕಾರಕ್ಕಾಗಿ ಅವರು ಮನವಿ ಮಾಡಿದ್ದಾರೆ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿದ್ದ ಪೊಲೀಸ್ ಆಯುಕ್ತ ಡಾ‌.ಪಿ.ಎಸ್.ಹರ್ಷ

ಈ ಬಗ್ಗೆ ಯಾವುದೇ ಬಣ್ಣಗಳನ್ನು ನೀಡದಂತೆ ಮಾಧ್ಯಮ ಸ್ನೇಹಿತರಿಗೆ ವಿನಂತಿಸಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬೆಂಬಲವನ್ನು ನೀಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details