ಕರ್ನಾಟಕ

karnataka

ETV Bharat / state

ಮಂಗಳೂರು ಗೋಲಿಬಾರ್ ಪ್ರಕರಣ: ಮ್ಯಾಜಿಸ್ಟ್ರೀಯಲ್ ವಿಚಾರಣೆ ಮುಕ್ತಾಯ - manglore golibar case investigation over news

2019 ಡಿಸೆಂಬರ್​ 19 ರಂದು ನಡೆದ ಮಂಗಳೂರು ಗೋಲಿಬಾರ್ ಪ್ರಕರಣದ ಅಂತಿಮ ವಿಚಾರಣೆ ಇಂದಿಗೆ ಮುಕ್ತಾಯಗೊಂಡಿದೆ. ಘಟನೆ ಸಂಬಂಧ ಇಲ್ಲಿವರೆಗೆ 416 ಜನರನ್ನು ಮಾಜಿಸ್ಟ್ರೀಯಲ್ ವಿಚಾರಣೆ ಮಾಡಲಾಗಿದ್ದು, ಸರ್ಕಾರಕ್ಕೆ ಸಲ್ಲಿಸಲು ಅಂತಿಮ ವರದಿಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುತ್ತದೆ ಎಂದು ಮ್ಯಾಜಿಸ್ಟ್ರೀಯಲ್ ತನಿಖಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

manglore golibar case court  investigation
ಮಂಗಳೂರು ಗೋಲಿಬಾರ್

By

Published : Sep 1, 2020, 4:20 PM IST

ಮಂಗಳೂರು: ಕಳೆದ ವರ್ಷ ಡಿ.19ರಂದು ನಡೆದ ಮಂಗಳೂರು ಗೋಲಿಬಾರ್ ಗೆ ಸಂಬಂಧಿಸಿದಂತೆ ಅಂತಿಮ ಮ್ಯಾಜಿಸ್ಟ್ರೀಯಲ್ ತನಿಖೆಯಲ್ಲಿ‌ 45 ಮಂದಿ ಸಾರ್ವಜನಿಕರು ಸೇರಿ ಡಿಸಿ, ಎಸಿ, ಎಸಿಪಿ‌ ಹಾಗೂ ಮೂವರು ವೈದ್ಯರನ್ನು ವಿಚಾರಣೆ ನಡೆಸಲಾಯಿತು.

ಮಂಗಳೂರು ಗೋಲಿಬಾರ್ ಪ್ರಕರಣ
ನಗರದ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೀಯಲ್ ತನಿಖಾಧಿಕಾರಿ ಜಿ.ಜಗದೀಶ್ ಅವರು ಸಾರ್ವಜನಿಕರಿಂದ ಲಿಖಿತ ದಾಖಲೆ ಹಾಗೂ ಅಂದಿನ ಗೋಲಿಬಾರ್ ಗೆ ಸಂಬಂಧಿಸಿದ ವಿಡಿಯೋ ದಾಖಲೆಗಳ‌ ಕ್ಲಿಪ್ಪಿಂಗ್ ಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭ 45 ಜನ ಸಾರ್ವಜನಿಕರು ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೆ ನಿರ್ಗಮಿತ ಡಿಸಿ ಸಿಂಧೂ ಬಿ.ರೂಪೇಶ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ‌ ವಿಚಾರಣೆ ನಡೆಸಲಾಯಿತು. ಅಲ್ಲದೆ ನಿರ್ಗಮಿತ ಪೊಲೀಸ್ ಕಮಿಷನರ್ ಪರವಾಗಿ ಎಸಿಪಿಯವರು ಉಳಿದ ದಾಖಲೆಗಳನ್ನು ವಿಚಾರಣೆಗೆ ಹಾಜರು ಪಡಿಸಿದರು.
ಈ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ವಿಚಾರಣೆಗಳನ್ನು ಇಂದು ಸಂಪೂರ್ಣಗೊಳಿಸಿದ್ದು, ಸರ್ಕಾರಕ್ಕೆ ಸಲ್ಲಿಸಲು ಅಂತಿಮ ವರದಿಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುತ್ತದೆ. ಇಲ್ಲಿಯವರೆಗೆ 416 ಜನರನ್ನು ಮಾಜಿಸ್ಟ್ರೀಯಲ್ ವಿಚಾರಣೆ ಮಾಡಲಾಗಿದ್ದು, ಅವೆಲ್ಲಾ ದಾಖಲೆಗಳನ್ನು, ವಿಡಿಯೋ ತುಣುಕುಗಳನ್ನು ಪರಿಶೀಲನೆ ಮಾಡಬೇಕಾಗಿದೆ. ಆ ಬಳಿಕ ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತದೆ. ಸರ್ಕಾರಕ್ಕೆ ಒಂದು ತಿಂಗಳ ಅವಧಿಯನ್ನು ಈ ತಿಂಗಳ 21ರವರೆಗೆ ವಿಸ್ತರಣೆ ಮಾಡಿದೆ. ಅಷ್ಟರಲ್ಲಿ ಈ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ABOUT THE AUTHOR

...view details